Breaking News

ಕೊಲ್ಲೂರು: ಉತ್ತಮ ಕರ್ತವ್ಯಕ್ಕೆ ಪ್ರಶಸ್ತಿ ಪಡೆದಿದ್ದ ಪೋಸ್ಟ್‌ಮೆನ್ ಆತ್ಮಹತ್ಯೆ

ಉತ್ತಮ ಕರ್ತವ್ಯ ನಿರ್ವಹಣೆಗೆ ಪ್ರಶಸ್ತಿ ಪಡೆದ ಪೋಸ್ಟ್‌ಮೆನೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.9ರಂದು ಬೆಳಗ್ಗೆ ಕೊಲ್ಲೂರಿನಲ್ಲಿ ನಡೆದಿದೆ. ಮೃತರನ್ನು ಕೊಲ್ಲೂರಿನ ರವೀಂದ್ರ ಎಂಬವರ ಮಗ ಮಂಜುನಾಥ ಕೆ. ಆರ್.(31) ಎಂದು ಗುರುತಿಸಲಾಗಿದೆ. ಕೊಲ್ಲೂರಿನಲ್ಲಿ ಪೋಸ್ಟ್‌ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಸುಮಾರು 4 ತಿಂಗಳ ಹಿಂದೆ ಉತ್ತಮ ಅಂಚೆ ಕರ್ತವ್ಯ ಮಾಡಿದ ಕಾರಣಕ್ಕೆ ಪ್ರಶಸ್ತಿ ದೊರೆತಿತ್ತು. ಬಳಿಕ ಕೊಲ್ಲೂರಿ ನಲ್ಲಿಯೂ ಈ ಬಗ್ಗೆ ಸನ್ಮಾನ ಮಾಡಲಾಗಿತ್ತು. ಇವರು ಇದೇ ವಿಚಾರದಲ್ಲಿ ಮಾನಸಿಕ ಸಮಸ್ಯೆಗೆ ಒಳಗಾಗಿದ್ದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಕೊಲ್ಲೂರಿನ ಮಹಾಲಕ್ಷ್ಮಿ ಹೊಟೇಲ್ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *