ರಾಘವೇಂದ್ರ ಶೆಟ್ಟರ ಎಂಬುವವರು 4 ತೊಲೆ ಬಂಗಾರದ ತಾಳಿ ಸರವಿದ್ದ ಬ್ಯಾಗ್ ಅನ್ನು ಬಸ್‌ನಲ್ಲಿ ಮರೆತು ಹೋಗಿದ್ದು, ಅದನ್ನು ಅವರಿಗೆ ಮರಳಿಸುವ ಮೂಲಕ ವಾ.ಕ.ರಾ.ರ.ಸಾರಿಗೆ ಬಸ್‌ನ ರೋಣ ಘಟಕದ ಬಸ್ ಚಾಲಕ ಕೆ.ಜಿ.ದಾಸರ ಹಾಗೂ ನಿರ್ವಾಹಕ ಬಸವರಾಜ ಮುಗಳಿ ಪ್ರಾಮಾಣಿಕತೆ ಮೆರೆದಿದ್ದಾರೆ.ರೋಣ ಪೊಲೀಸ್ ಠಾಣೆಗೆ ಮಹಿಳೆಯನ್ನು ಕರೆಸಿ ಬ್ಯಾಗ್ ನೀಡಲಾಯಿತು. ರೋಣ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಾಶ ಬಣಕಾರ ಚಾಲಕ ಹಾಗೂ ನಿರ್ವಾಹಕರ ಕಾರ್ಯವನ್ನು ಶ್ಲಾಘಿಸಿ, ಸನ್ಮಾನಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

