Breaking News

2019 ರಲ್ಲಿ ಬಿಜೆಪಿ ನಾಶವಾಗಿ ಹೋಗುತ್ತೆ – ಮಮತಾ ಬ್ಯಾನರ್ಜೀ..

ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಎನ್.ಆರ್.ಸಿಯನ್ನು ಬಂಗಾಳದಲ್ಲಿ ಕಾರ್ಯುಗತಗೊಳ್ಳಲು ಬಿಡುವುದಿಲ್ಲ ಎಂದು ತಿಳಿಸಿದರು
ಕೊಲ್ಕತ್ತಾ: ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಎನ್.ಆರ್.ಸಿಯನ್ನು ಬಂಗಾಳದಲ್ಲಿ ಕಾರ್ಯುಗತಗೊಳ್ಳಲು ಬಿಡುವುದಿಲ್ಲ ಎಂದು ತಿಳಿಸಿದರು.ಅಲ್ಲದೆ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಶವಾಗಿ ಹೊಗುತ್ತದೆ ಎಂದರು. 
ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ ಮಮತಾ ಬ್ಯಾನರ್ಜೀ” ನಾವು ಎನ್ ಆರ್ ಸಿಯನ್ನು ಬಂಗಾಳದಲ್ಲಿ ಕಾರ್ಯಗತಗೊಳಿಸಲು ಬಿಡುವುದಿಲ್ಲ.ನಮಗೆ ಬಿಜೆಪಿ ನಾಯಕರು ಸವಾಲ್ ಹಾಕಿದ್ದಾರೆ.ಅದಕ್ಕೆ ನಾವು ಸೂಕ್ತ ಉತ್ತರ ಕೊಡುತ್ತೇವೆ” ಎಂದು ತಿಳಿಸಿದರು.
ಇನ್ನು ಇತ್ತೀಚೆಗಿನ ಪಂಚಾಯತ್ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ರಾಜ್ಯ ಈಗ ಕೊಲೆ ರಾಜಕಾರಣದಿಂದ ಯಥಾಸ್ಥಿತಿಗೆ ಮರಳುತ್ತಿದೆ ಎಂದು ತಿಳಿಸಿದರು.
ಪ್ರಜೆಗಳನ್ನು ವಿದೇಶಿಗರು ಎಂದು  ಕರೆದರೆ ತಾವು  ಸಹಿಸುವುದಿಲ್ಲ ಎಂದು ಅವರು  ತಿಳಿಸಿದರು.ಎನ್ ಆರ್ ಸಿ ವಿಚಾರದ ಕುರಿತಾಗಿ ಪ್ರಸ್ತಾಪಿಸಿದ ಅವರು “ನಾವು ಬಂಗಾಳದ ಹುಲಿಗಳು ಭಾರತೀಯ ಪ್ರಜೆಗಳನ್ನು ಇಲ್ಲಿ ವಿದೇಶಿಯರು ಎಂದು ಕರೆದರೆ ನಾವು ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *