ಬೆಂಗಳೂರು: ಹ್ಯಾಂಡ್ ಲಾಕ್ ಮುರಿದು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಂದ್ರಹಳ್ಳಿ ನಿವಾಸಿ ಮೂರ್ತಿ(20) ಬಂಧಿತ. ಆರೋಪಿಯಿಂದ 3.5 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಅಂದ್ರಹಳ್ಳಿ ರಸ್ತೆಯ ವಿದ್ಯಾಮಾನ್ಯ ನಗರದ 8ನೇ ಕ್ರಾಸ್‌ನಲ್ಲಿ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದ ಬಳಿ ಅನುಮಾನಾಸ್ಪದವಾಗಿ ನಿಂತಿರುವುದು ಕಂಡು ಬಂದಿತ್ತು. ತಕ್ಷಣ ಸಿಬ್ಬಂದಿ ಆತನನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ನೇಹಿತನ ಜತೆಗೂಡಿ ನಗರದ ವಿವಿಧೆಡೆ ಮನೆ ಮುಂದೆ ನಿಲ್ಲಿಸಿದಂತಹ ಬೈಕ್‌ಗಳ ಬೀಗ ಮುರಿದು ಕಳ್ಳತನ ಮಾಡು ತ್ತಿ ರುವು ದಾಗಿ ಒಪ್ಪಿಕೊಂಡಿದ್ದಾನೆ. ಕಳವು ಮಾಡಿದ ಬೈಕ್‌ಗಳನ್ನು ಮಾರಾಟ ಮಾಡುವ ಸಲುವಾಗಿ ಕಮಲನಗರದ ಖಾಲಿ ಜಾಗವೊಂದರಲ್ಲಿ 9 ಬೈಕ್ ನಿಲ್ಲಿಸಿರುವುದಾಗಿ ಬಾಯ್ದಿಟ್ಟಿದ್ದಾನೆ. ಈತನ ಸ್ನೇಹಿತ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಾಗಿದ್ದು, ತಿಳುವಳಿಕೆ ನೀಡಿ ತಾಯಿಯ ಜತೆ ಕಳುಹಿಸಿದ್ದಾರೆ. ª ಒಟ್ಟು 7 ಬೈಕ್ ಕಳವು ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

