Breaking News

ಮೀಟೂ’ ಅಂತ ಹೇಳಿದ ಆಯುಷ್ಮಾನ್ ಪತ್ನಿ.

ಮುಂಬೈ: ಮೀಟೂ ಎಂದರೆ ಈಗ ಭಾರತದಲ್ಲಿ ಗೊತ್ತಿಲ್ಲದವರೇ ಇಲ್ಲದಂತಾಗಿದೆ. ಅಷ್ಟೊಂದು ಬೇಗ ಪ್ರಚಾರ ಪಡೆದುಕೊಂಡಿತು. ಇದರ ಮೂಲಕ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು, ಪತ್ರಕರ್ತೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರ ಬಗ್ಗೆ ಆರೋಪಿಸಿದ್ರು. ಆದರೆ ಇದರ ಬಗ್ಗೆ ನಟ ಆಯುಷ್ಮಾನ್​ ಖುರಾನಾ ಪತ್ನಿ ತಾಹಿರಾ ಕಶ್ಯಾಪ್​ ಮೀಟೂ ಕೇವಲ ಜನಪ್ರಿಯ ಹೊಂದಿರುವ ಮಹಿಳೆಯರಿಗೆ ಮಾತ್ರ ಮೀಟೂ ಸೀಮಿತವಲ್ಲ. ಈ ಬಗ್ಗೆ ತಾಹಿರಾ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದು, ಹತ್ತಿರದ ನೆಂಟರು, ಸಂಬಂಧಿಕರಿಂದಲೇ ಮಕ್ಕಳು ಲೈಂಗಿಕ ದೌರ್ಜನ್ಯ ಭೀತಿಗೆ ಒಳಗಾಗಿರುತ್ತಾರೆ. ನಾನು ಬಾಲ್ಯದಲ್ಲಿ ಇಂಥ ದೌರ್ಜನ್ಯವನ್ನ ಎದುರಿಸಿದ್ದೇನೆ ಅಂತ ಹೇಳಿದ್ದಾರೆ.
ಪತಿ ದೇಹ ಮುಟ್ಟಿದ್ದಕ್ಕೆ ಭಯಗೊಂಡಿದ್ದೆ
ಆಯುಷ್ಮಾನ್ ಮತ್ತು ನಾನು ಮೊದಲು ಮೊದಲು ಡೇಟಿಂಗ್ ಮಾಡುವಾಗ, ನನ್ನ ಮುಟ್ಟಿದರೂ ಭಯ ಬೀಳುತ್ತಿದ್ದೆ. ಆದ್ರೆ, ಆಯುಷ್ಮಾನ್​ನ ಪ್ರೀತಿ ಮತ್ತು ತಾಳ್ಮೆ ನಾನು ನನ್ನ ನೋವಿಂದ ಹೊರ ಬರಲು ನೆರವಾಯ್ತು ಅಂತ ಹೇಳಿದ್ದಾರೆ. ನಮಗೇ ಮಗು ಆದ ಮೇಲೂ ನನಗೆ ನನ್ನ ಹಳೇ ನೆನಪುಗಳು ಕಾಡುತ್ತವೆ. ನನ್ನ ಪತಿ ಮತ್ತು ಪೋಕಷರ ಬಳಿ ಹೇಳಿಕೊಳ್ಳುವವರೆಗೂ ಸುಮಾರು 20 ವರ್ಷಗಳ ಕಾಲ ನಾನು ಆ ನರಕವನ್ನ ಅನುಭವಿಸಿದ್ದೇನೆ ಅಂತ ತಾಹಿರಾ ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಬರೆದಿದ್ದಾರೆ.
ದೌರ್ಜನ್ಯ ಹೇಳಿಕೊಳ್ಳುಲು 20 ವರ್ಷ ಬೇಕಾಯಿತು
ಮೀಟೂ ಅಭಿಯಾನಕ್ಕೆ ಪುರುಷರೂ ಬೆಂಬಲ ನೀಡುತ್ತಿದ್ದು, ಈ ಯುದ್ಧವನ್ನ ನಾವು ಇನ್ನೂ ಸೋತಿಲ್ಲ. ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಮಹಿಳೆಯರು ಮುಂದೆ ಬಂದು ಹೇಳಿಕೊಳ್ಳಬೇಕು. ನಾವು ಈಗಲಾದ್ರೂ ಇದರ ಬಗ್ಗೆ ಮಾತನಾಡುತ್ತಿದ್ದೇವೆ. ಇದನ್ನ ಯಾರೂ ಪ್ರಶ್ನಿಸಬಾರದು. ಇಷ್ಟು ದಿನಗಳ ಕಾಲ ಯಾಕೆ ಸುಮ್ಮನಿದ್ದೆ ಅಂತ ಕೇಳಬಾರದು. ನನಗೇ ನನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಹೇಳಿಕೊಳ್ಳಲು 20 ವರ್ಷಗಳ ಸಮಯ ಹಿಡಿದಿದೆ. ಇದೇ ನನ್ನ ತಪ್ಪಾ ಅಂತಲೂ ತಾಹಿರಾ ಕಶ್ಯಪ್ ಪ್ರಶ್ನಿಸಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *