Breaking News

ಬಿಜೆಪಿ ನಾಯಕನ ಕಾರಿಗೆ ಬಾಂಬ್‌

ಕುಂಬಳೆ: ರಾಜಕೀಯ, ಧಾರ್ಮಿಕ ನಾಯಕರಾಗಿರುವ ಕುಂಬಳೆ ವ್ಯಾಪಾರಿ ವ್ಯವಸಾಯಿ ಘಟಕದ ಮಾಜಿ ಅಧ್ಯಕ್ಷ ಬಿ. ವಿಕ್ರಂ ಪೈ ಕುಂಬಳೆ ಅವರ ಕಾರಿಗೆ ಬಾಂಬ್‌ ಇಟ್ಟು ಸ್ಫೋಟಿಸಿದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.ಪೈ ಅವರು ತನ್ನ ಪೊಸತ್ತಡ್ಕ ಗೋಶಾಲೆಗೆ ಕಾರಿನಲ್ಲಿ ತೆರಳುವಾಗ ಕಾಂಕ್ರೀಟ್‌ ರಸ್ತೆಯಲ್ಲಿರಿಸಿದ್ದ ನಾಡ ಬಾಂಬ್‌ ಸಿಡಿಯಿತು. ಕಾರು ಎರಡು ಅಡಿ ಮೇಲಕ್ಕೆ ಹಾರಿ ರಸ್ತೆಯಲ್ಲಿ ನಿಂತಾಗ ಎರಡು ಚಕ್ರಗಳು ಸ್ಫೋಟಗೊಂಡವು. ಕಾರಿನಲ್ಲಿ ಪೈ ಅವರು ಮಾತ್ರವಿದ್ದು ಏನೂ ಅಪಾಯವಿಲ್ಲದೆ ಪಾರಾಗಿದ್ದಾರೆ. ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಪೈ ಅವರು ಉದಯವಾಣಿಗೆ ತಿಳಿಸಿದರು. ಕುಂಬಳೆ ಬಿ. ಸರ್ವೋತ್ತ‌ಮ ಪೈ ಅವರ ಕುಟುಂಬ ಹಿಂದಿನಿಂದಲೂ ಸಂಘಪರಿವಾರದಲ್ಲಿ ಸಕ್ರಿಯವಾಗಿದ್ದು ವಿಕ್ರಂ ಅವರು ಅದೇ ಮನೆಯವರಾಗಿದ್ದಾರೆ. ಅವರು ಕೂಡ ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದು ಕಳೆದ ಕುಂಬಳೆ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ಸ್ಪರ್ಧಿಸಿದ್ದರು. ಕುಂಬಳೆ ಎಸ್‌ಐ ಶ್ರೀಜಿತ್‌ ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದರು. ತನಿಖೆ ಮುಂದುವರಿದಿದೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *