Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಬಾಂಬ್ ದಾಳಿಗಳಲ್ಲಿ ಮೃತಪಟ್ಟ 8 ಮಂದಿ ಬೆಂಗಳೂರಿಗರ ವಿವರ ಲಭ್ಯ

ಬೆಂಗಳೂರು: ರಾಜ್ಯದಿಂದ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದವರ ಪೈಕಿ ಕೆಲವರು ಭಾನುವಾರ ಅಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಅಸುನೀಗಿದ್ದರು. ಕೆ. ಹನುಮಂತರಾಯಪ್ಪ, ಕೆ.ಎಂ ಲಕ್ಷ್ಮೀನಾರಾಯಣ, ಎಂ.ರಂಗಪ್ಪ, ಲಕ್ಷ್ಮಣ್ ಗೌಡ ರಮೇಶ್, ನಾಗರಾಜ್ ರೆಡ್ಡಿ, ಎಚ್ ಶಿವಕುಮಾರ್, ಎ.ಮಾರೇಗೌಡ, ಎಚ್.ಪುಟ್ಟರಾಜು ಹಾಗೂನಾರಾಯಣ್ ಚಂದ್ರಶೇಖರ್-ರೆಮುರಾಯ್ ತುಳಸಿರಾಮ್ ಎಂಬಿಬ್ಬರು ಮೃತಪಟ್ಟಿದ್ದರು. ಅವರ ವಿವರ ಇದೀಗ ಲಭ್ಯವಾಗಿದೆ. ಮೃತರ ವಿವರ ಇಲ್ಲಿದೆ:ಕೆ. ಹನುಮಂತರಾಯಪ್ಪ: ಕಾಚನಹಳ್ಳಿ ನಿವಾಸಿಯಾಗಿದ್ದ ಹನುಮಂತರಾಯಪ್ಪ ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಾಧ್ಯಕ್ಷ ಮತ್ತು ನೆಲಮಂಗಲದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.ಕೆ.ಎಂ ಲಕ್ಷ್ಮೀನಾರಾಯಣ: ಕಾಚನಹಳ್ಳಿ ನಿವಾಸಿಯಾಗಿದ್ದ ಕೆ.ಎಂ ಲಕ್ಷ್ಮೀನಾರಾಯಣ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಾಗಿದ್ದರು.ಎಂ.ರಂಗಪ್ಪ: ಜೆಡಿಎಸ್ ಕಾರ್ಯಕರ್ತನಾಗಿದ್ದ ರಂಗಪ್ಪ, ದಾಸರಹಳ್ಳಿ ಬೂತ್ ಸಮಿತಿಯ ಅಧ್ಯಕ್ಷರೂ ಆಗಿದ್ದರು.ಲಕ್ಷ್ಮಣ್ ಗೌಡ ರಮೇಶ್: ತುಮಕೂರು ಮೂಲದ ಉದ್ಯಮಿ, ಎಸ್ಎಸ್ ರೋಡ್ ನಿವಾಸಿ.ನಾಗರಾಜ್ ರೆಡ್ಡಿ: ಬಿಟಿಎಂ ಲೇಔಟ್ ನಿವಾಸಿಯಾಗಿದ್ದ ನಾಗರಾಜ್ ರೆಡ್ಡಿ, ಟೈಲ್ಸ್ ಉದ್ಯಮಿ ಹಾಗೂ ಶಾಸಕ ರಾಮಲಿಂಗಾ ರೆಡ್ಡಿ ಆಪ್ತರಾಗಿದ್ದರು.ಎಚ್ ಶಿವಕುಮಾರ್: ನೆಲಮಂಗಲದ ಗೋವಿಂದಪ್ಪ ಲೇಔಟ್ ನಿವಾಸಿಯಾಗಿದ್ದ ಇವರು ನೆಲಮಂಗಲದ ಹರ್ಷ ಆಸ್ಪತ್ರೆಯ ಪಾಲುದಾರರು.ಎ.ಮಾರೇಗೌಡ: ಅಡಕಮಾರನಹಳ್ಳಿ ನಿವಾಸಿಯಾಗಿದ್ದ ಮಾರೇಗೌಡ, ಜೆಡಿಎಸ್ ಕಾರ್ಯಕರ್ತ ಹಾಗೂ ಜೆಡಿಎಸ್ ನಾಯಕ ಇ.ಕೃಷ್ಣಪ್ಪ ಬೆಂಬಲಿಗ.ಎಚ್.ಪುಟ್ಟರಾಜು: ಹಾರೋಕ್ಯಾತನಹಳ್ಳಿ ನಿವಾಸಿಯಾಗಿದ್ದ ಪುಟ್ಟರಾಜು, ಎ.ಮಾರೇಗೌಡರ ಆಪ್ತ ಸ್ನೇಹಿತರಾಗಿದ್ದರು. ಪುಟ್ಟರಾಜು ಸಹ ಇ.ಕೃಷ್ಣಪ್ಪರ ಬೆಂಬಲಿಗ.ಬಾಂಬ್​ ಸ್ಫೋಟದಲ್ಲಿ ಮೃತಪಟ್ಟಿರುವುದಾಗಿ ದೃಢಪಟ್ಟ ಇನ್ನಿಬ್ಬರು ನಾರಾಯಣ್ ಚಂದ್ರಶೇಖರ್ ಹಾಗೂ ರೆಮುರಾಯ್ ತುಳಸಿರಾಮ್ ಎಂದು ತಿಳಿದುಬಂದಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *