Breaking News

ನಗರಕ್ಕೆ ಕಾಲಿಟ್ಟಿದೆ ಲೇಡಿಸ್ ರಾಬರಿ ಗ್ಯಾಂಗ್‌ – ಕಳ್ಳಿಯರ ಟೀಂ ವರ್ಕ್‌ ಸಿಸಿಟಿವಿಯಲ್ಲಿ ಸೆರೆ!

ಬೆಂಗಳೂರು: ನಗರದಲ್ಲಿ ಮಹಿಳೆಯರ ದರೋಡೆ ಗ್ಯಾಂಗ್ ಸಕ್ರಿಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಒಟ್ಟಾಗಿ ಗುಂಪಾಗಿ ಬರುವ ಈ ಮಹಿಳೆಯರು ನಕಲಿ ಕಾರಣ ಹೇಳಿಕೊಂಡು ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗುತ್ತಿರುವುದು ಆತಂಕ ಹುಟ್ಟಿಸಿದೆ. ಯಶವಂತಪುರದ ಗೋಲ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಘಟನೆಯಲ್ಲಿ, ಆರು ಮಹಿಳೆಯರು ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಅವರನ್ನು ಒಳಗೆ ಬಿಡಲು ನಿರಾಕರಿಸಿದಾಗ, ನಾಲ್ವರು ಮಹಿಳೆಯರು ಸೆಕ್ಯುರಿಟಿಯ ಜೊತೆ ಮಾತನಾಡುತ್ತಾ ಗಮನ ಬೇರೆಡೆ ಸೆಳೆದಿದ್ದಾರೆ. ಅದೇ ವೇಳೆ ಉಳಿದ ಇಬ್ಬರು ಮಹಿಳೆಯರು ಸೆಕ್ಯುರಿಟಿಯ ಕಣ್ಣುತಪ್ಪಿಸಿ ಒಳನುಗ್ಗಿದ್ದಾರೆ. ಅಪಾರ್ಟ್‌ಮೆಂಟ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಇರುವ ಸೆಕ್ಯುರಿಟಿ ಮನೆಯಲ್ಲಿ ಸುಮಾರು 40 ಸಾವಿರ ರೂ. ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಮಹಿಳೆಯರು ಉತ್ತರ ಕರ್ನಾಟಕ ಶೈಲಿಯ ಆರ್ಟಿಫಿಷಿಯಲ್ ಒಡವೆಗಳನ್ನು ಮಾರಾಟ ಮಾಡುವ ನೆಪದಲ್ಲಿ ಮನೆಗಳಿಗೆ ಹೋಗುತ್ತಿದ್ದರೆಂದು ಹೇಳಲಾಗಿದೆ.
ಈ ದರೋಡೆ ಗ್ಯಾಂಗ್‌ನ ಕೃತ್ಯಗಳು ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರದಲ್ಲಿ ಇಂತಹ ಹೊಸ ರೀತಿಯ ದರೋಡೆ ಯುಕ್ತಿಗಳ ಬಗ್ಗೆ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಸೂಚನೆ ನೀಡಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *