Breaking News

ಪೊಲೀಸ್ ಕಾನ್​ಸ್ಟೆಬಲ್​ ಹೆಂಡತಿ ನೇಣಿಗೆ ಶರಣು



ಚಿಕ್ಕನಾಯಕನಹಳ್ಳಿ: ಪೊಲೀಸ್ ಕಾನ್​ಸ್ಟೆಬಲ್​ವೊಬ್ಬರ ಹೆಂಡತಿ ನೇಣು ಹಾಕಿಕೊಂಡ ಪ್ರಕರಣ ನಡೆದಿದೆ.

ಗಂಡ ಕೆಲಸಕ್ಕೆ ಹೋದ ಸಮಯದಲ್ಲಿ ಪೊಲೀಸ್​ ವಸತಿಗೃಹದಲ್ಲಿ ನೇಣು ಹಾಕಿಕೊಂಡ ಪ್ರಕರಣ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ಪೊಲೀಸ್ ವಸತಿಗೃಹದಲ್ಲಿ ವಾಸವಿದ್ದ ಪೊಲೀಸ್ ಕಾನ್​ಸ್ಟೆಬಲ್ ಶಶಿಧರ್ ಎಂಬವರ ಪತ್ನಿ ಲಾವಣ್ಯ (21) ಆತ್ಮಹತ್ಯೆ ಮಾಡಿಕೊಂಡವರು.

ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಲಾವಣ್ಯ-ಶಶಿಧರ್ ದಂಪತಿಗೆ 6 ತಿಂಗಳಿನ ಗಂಡು ಮಗುವಿದೆ. ಈಕೆ ಮೂಲತಃ ಹುಳಿಯಾರು ಹೋಬಳಿ ಕಲ್ಲಹಳ್ಳಿ ಗ್ರಾಮದವರಾಗಿದ್ದು, ಬುಕ್ಕಾಪಟ್ಟಣದ ಬಳಿಯ ತುಪ್ಪದಕೋಣದ ಶಶಿಧರ್ ಅವರನ್ನು ಮದುವೆಯಾಗಿದ್ದರು.

ಶಶಿಧರ್ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಎಂಬ ಮಾಹಿತಿ ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.

Share News

About admin

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *