Breaking News

₹ 2,000 ಮೌಲ್ಯದ ಟಿವಿ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ: 28 ವರ್ಷಗಳ ಬಳಿಕ ಸೆರೆ

ದಾವಣಗೆರೆ: ನಗರದ ರಂಗನಾಥ ಬಡಾವಣೆಯಲ್ಲಿ ₹ 2,000 ಮೌಲ್ಯದ ಟಿವಿ ಕದ್ದು 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಗ್ರಾಮಾಂತರ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದಾನೆ. ದೇವರಾಜ ಅರಸು ಬಡಾವಣೆಯ ಫಕೀರ (50) ಬಂಧಿತ ಆರೋಪಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.ಇನ್ನೊಬ್ಬ ಆರೋಪಿ ರಾಜ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ನಗರದ ರಂಗನಾಥ ಬಡಾವಣೆಯ ರುದ್ರಯ್ಯ ಎಂಬುವರ ಮನೆಯಲ್ಲಿ 1998ರ ಸೆ.23ರಂದು ಟಿವಿ ಕಳವಾಗಿತ್ತು. ದೂರು ಆಧರಿಸಿ ಪೊಲೀಸರು ರವಿ ಮತ್ತು ಮುನಾವರ್‌ ಎಂಬುವರನ್ನು ಬಂಧಿಸಿ ಕಳವಾಗಿದ್ದ ಟಿವಿ ಜಪ್ತಿ ಮಾಡಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಫಕೀರ ಹಾಗೂ ರಾಜ ತಲೆಮರೆಸಿಕೊಂಡಿದ್ದರು. ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ 2019ರವರೆಗೆ ಪೊಲೀಸರು ಪ್ರಯತ್ನಿಸಿದ್ದರು. ನಂತರ ಇದನ್ನು ಬಹುದಿನಗಳಿಂದ ಪತ್ತೆಯಾದ ಪ್ರಕರಣದ ಪಟ್ಟಿಗೆ ಸೇರಿಸಿದ್ದರು. ನೂತನ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಟಿ. ಶೇಖರ್‌ ನಿರ್ದೇಶನದ ಮೇರೆಗೆ ಮರುಪತ್ತೆಗೆ ಮುಂದಾದ ಪೊಲೀಸರಿಗೆ ಆರೋಪಿ ಸೆರೆಸಿಕ್ಕಿದ್ದಾನೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *