ಹುಬ್ಬಳ್ಳಿ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಶಿಶುಗಳ ಸುರಕ್ಷತೆ ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ಹೊಸ ಪ್ಲಾನ್ ಮಾಡಿದೆ. ಆಸ್ಪತ್ರೆಯಲ್ಲಿ ಇತ್ತೀಚೆಗೆ ಶಿಶುಗಳ ಕಳ್ಳತನ ಆಗುತ್ತಿದೆ. ಇದನ್ನು ತಡೆಗಟ್ಟಲು ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ತಂದಿದೆ. ಇನ್ನು ಮುಂದೆ ಹೆರಿಗೆ ವಾರ್ಡ್ಗೆ ಬರಬೇಕಾದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬರಬೇಕು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕುಟುಂಬದವರು ಒಳಹೋಗಬೇಕು ಎಂದು ಕಿಮ್ಸ್ ಹೇಳಿದೆ. ಹೆರಿಗೆ ವಾರ್ಡ್ ಪ್ರವೇಶಿಸುವ ಕುಟುಂಬದ ಸದಸ್ಯರಿಗೆ ಸಿಬ್ಬಂದಿ ಕ್ಯೂಆರ್ ಕೋಡ್ ಜನರೇಟ್ ಮಾಡಿ ನೀಡುತ್ತಾರೆ. ಇದನ್ನು ಸ್ಕ್ಯಾನ್ ಮಾಡಿದ ನಂತರವೇ ಒಳಹೋಗಲು ಅವಕಾಶವಿರುತ್ತದೆ. ಸಾಮಾನ್ಯ ಹೆರಿಗೆಯಾದವರಿಗೆ 3 ದಿನಗಳ ಪಾಸ್ ಮತ್ತು ಸಿಸೇರಿಯನ್ ಆದವರಿಗೆ 7 ದಿನಗಳ ಪಾಸ್ ನೀಡಲಾಗುತ್ತದೆ. ಒಂದು ಪಾಸ್ ಬಳಸಿ ಒಬ್ಬರು ಒಳಹೋದರೆ, ಅದೇ ಪಾಸ್ ಅನ್ನು ಹೊರಗಿನವರಿಗೆ ನೀಡಿ ಅವರು ಒಳಬರಲು ಸಾಧ್ಯವಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

