Breaking News

ಹತ್ತಕ್ಕೂ ಮಿಕ್ಕಿ ಪ್ರಕರಣದ ಆರೋಪಿ ಬಂಧನ

ಕುಂದಾಪುರ: ರಾಜ್ಯದ ವಿವಿಧ ಠಾಣೆಗಳಲ್ಲಿ ಕಳ್ಳತನ, ಸುಲಿಗೆ, ಹನಿ ಟ್ರ್ಯಾಪ್ ಸಹಿತ ಹತ್ತಕ್ಕೂ ಮಿಕ್ಕಿ ಪ್ರಕರಣಗಳಲ್ಲಿ ಆರೋಪಿಯಾಗಿ, ಪರಾರಿಯಾಗಿದ್ದ ಗುಲ್ವಾಡಿಯ ನಿವಾಸಿ ಶಶಾಂಕ್ ಶೆಟ್ಟಿ (32) ಎಂಬಾತನನ್ನು ರವಿವಾರ ಕುಂದಾಪುರ ಪೊಲೀಸರು ಬಿದ್ಕಲ್ ಕಟ್ಟೆ ಸಮೀಪ ಬಂಧಿಸಿದ್ದಾರೆ.ಈತನ ವಿರುದ್ದ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 7, ಹೆಬ್ರಿ, ಕಲಘಟಕಿ, ಕೋಟ, ಬೆಂಗಳೂರಿನಲ್ಲಿ ತಲಾ 1 ಪ್ರಕರಣಗಳು ದಾಖಲಾಗಿದ್ದವು. ಕಳ್ಳತನ, ಸುಲಿಗೆ, ಹನಿಟ್ರ್ಯಾಪ್ ಸಹಿತ ಒಟ್ಟು 11 ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಕಳೆದ 4 ವರ್ಷಗಳಿಂದ ಬಂಧನ ವಾರಂಟ್ ಇತ್ತು. ಕುಂದಾಪುರ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ, ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಎಸ್ ಐಗಳಾದ ನಾಸೀರ್ ಹುಸೇನ್ ಹಾಗೂ ಚಂದ್ರಕಲಾ, ಸಿಬಂದಿಯಾದ ರಾಜು ಬಿ., ಗುರುಪ್ರಸಾದ್, ಕಿರಣ್ ಬಿ.ಪಾಟೀಲ್, ಚಂದ್ರ ಶೆಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *