ಪಂಜಾಬ್ನ ಲೂಧಿಯಾನದ ದುರ್ಗಿ ಕಾಲೋನಿಯಲ್ಲಿ ಬೈಕಿನಲ್ಲಿ ಬಂದಾತ ಕಾರ್ಮಿಕ ಮಹಿಳೆಯ ಮೇಲೆ ಆಯಸಿಡ್ ಎರಚಿದ್ದರಿಂದ ಮಹಿಳೆ ಗಾಯಗೊಂಡಿದ್ದಾರೆ. ಮಹಿಳೆ ಉತ್ತರ ಪ್ರದೇಶ ಮೂಲದವರಾಗಿದ್ದು ಮೂವರು ಮಕ್ಕಳ ತಾಯಿ. ಬೈಕಿನಲ್ಲಿ ಬಂದ ದಾಳಿಕೋರ ಮಹಿಳೆಯನ್ನು ಹತ್ತಿರ ಕರೆದು ಮಾತನಾಡಿಸಿದ್ದು ಈ ವೇಳೆ ಆಯಸಿಡ್ ಎರಚಿದ್ದಾನೆ.ಆಕೆಯ ಮುಖ ಮತ್ತು ಕಣ್ಣಿನ ಹುಬ್ಬು ಸುಟ್ಟು ಹೋಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಯಸಿಡ್ ದಾಳಿಕೋರ ಹೆಲ್ಮೆಟ್ ಧರಿಸಿದ್ದು ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

