Breaking News

ದಸರಾ ರಜೆಯಲ್ಲಿ ಕಡಿತವಿಲ್ಲ: ಸಚಿವ ಯು.ಟಿ. ಖಾದರ್‌..

ಮಂಗಳೂರು: ರಾಜ್ಯದ ಇತರೆಡೆಗಳಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಅಕ್ಟೋಬರ್ 7 ರಿಂದ 21ರವರೆಗೆ ದಸರಾ ರಜೆ ಇರಲಿದೆ ಎಂದು ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ ಸಚಿವ ಯು.ಟಿ. ಖಾದರ್‌, ರಜೆ ಕಡಿತ ಮಾಡಿ ಜಿಲ್ಲಾಡಳಿತ ಹೊರಡಿಸಿದ ಆದೇಶವನ್ನು ಹಿಂಪಡೆಯಲಾಗುವುದು. ದಸರಾ ರಜೆಗಾಗಿ ಹಲವರು ಪ್ರವಾಸ, ಕೌಟುಂಬಿಕ ಕಾರ್ಯಕ್ರಮಗಳನ್ನು ನಿಗದಿ ಮಾಡಿರುತ್ತಾರೆ. ಕಡಿತಗೊಳಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ಎಂದಿನಂತೆಯೇ ದಸರಾ ರಜೆ ನೀಡಲಾಗುವುದು ಎಂದರು.
ಇನ್ನು ಶಾಲಾ ಕರ್ತವ್ಯದ ಅವಧಿಯನ್ನು ಸರಿದೂಗಿಸಲು ಮುಂದಿನ ರಜಾ ದಿನಗಳಲ್ಲಿ ಪೂರ್ಣ ದಿನ ಶಾಲೆ ನಡೆಸಿ ಕರ್ತವ್ಯದ ಅವಧಿಯನ್ನು ಸರಿದೂಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *