Breaking News

ಮೆಜೆಸ್ಟಿಕ್‌ನಲ್ಲಿ ಟಿಕೆಟ್ ಮಷೀನ್ ಕದ್ದ ಕಳ್ಳರು – ಪ್ರಯಾಣಿಕರು, ಸಿಬ್ಬಂದಿ ಪರದಾಟ

ಬೆಂಗಳೂರು: ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕದಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಹೈರಾಣಾದ ಘಟನೆ ನಡೆದಿದೆ. ಬೆಂಗಳೂರು-ಶಿರಸಿ ನಾನ್ ಎಸಿ ಸ್ಲೀಪರ್ ಬಸ್‌ನ ಟಿಕೆಟ್ ಮಷೀನ್‌ನ್ನು ಖದೀಮರು ಕದ್ದೊಯ್ದಿದ್ದಾರೆ. ಕಂಡಕ್ಟರ್ ಮತ್ತು ಡ್ರೈವರ್ ಅವರ ಬ್ಯಾಗ್ ಸಮೇತ ಖದೀಮರು ಹೊತ್ತೊಯ್ದಿದ್ದು, ಆ ಬ್ಯಾಗ್‌ನಲ್ಲಿ ಟಿಕೆಟ್ ಮಷೀನ್ ಇತ್ತು ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ ಬಸ್‌ ಸೇವೆ ಆರಂಭವಾಗದೆ ಎರಡು-ಮೂರು ಗಂಟೆಗಳ ಕಾಲ ಮೆಜೆಸ್ಟಿಕ್‌ನಲ್ಲೇ ಪ್ರಯಾಣಿಕರು ಪರದಾಡುವಂತಾಯಿತು. ಟಿಕೆಟ್ ಮಷೀನ್ ಇಲ್ಲದ ಕಾರಣ ಕೆಎಸ್‌ಆರ್‌ಟಿಸಿ ಬಸ್ ತಡರಾತ್ರಿವರೆಗೂ ನಿಂತಲ್ಲೇ ನಿಂತಿತ್ತು. ಬಳಿಕ ಸಿಬ್ಬಂದಿಗಳು ಮ್ಯಾನುಯಲ್ ಟಿಕೆಟ್ ನೀಡಿ ಬಸ್ ಸೇವೆಯನ್ನು ಆರಂಭಿಸಿದರು. ಆದರೆ ಈ ವಿಳಂಬದಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಯಿತು. ಖದೀಮರು ಬ್ಯಾಗ್ ಹೊತ್ತೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣವನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *