Breaking News

ನಿಮ್ಮ ಕಡೆ ‘ ರಾಜಾಹುಲಿ ‘ ಇದ್ರೆ ನಮ್ಮ ಕಡೆ ಹೆಬ್ಬುಲಿ ಇದೆ ; ಮಾಜಿ ಶಾಸಕ ಕಾಶಪ್ಪನವರ

ಹುಬ್ಬಳ್ಲಿ ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯ ದೊಡ್ಡದಿದೆ ನಾವು ಬಹುಸಂಖ್ಯಾತರು ಆದರೆ ಇಲ್ಲಿ ಅಲ್ಪಸಂಖ್ಯಾತರು ಆಗಿದ್ದೇವೆ . ಸಿಎಂ ಬೊಮ್ಮಾಯಿಯವರೇ ಇದೇ ಕೊನೆ ಹಂತ ಆಗಸ್ಟ್ 22 ರೊಳಗೆ ನಮಗೆ ಮೀಸಲಾತಿ ನೀಡಿ ಮೀಸಲಾತಿ ಕೊಡದೆ ಇದ್ದರೆ ನಿಮ್ಮನ್ನ ಮನೆಗೆ ಕಳಿಸುತ್ತೇವೆ

ಅಷ್ಟೇ ಅಲ್ಲದೆ ಎಂತಹ ರಾಜಾಹುಲಿಗಳ ಬಂದರೂ ನಾವು ನೋಡಿಕೊಳ್ಳುತ್ತೇವೆ . ನಮ್ಮ ಕಡೆ ಒಂದು ಬಸವರಾಜ ಪಾಟೀಲ್ ಯತ್ನಾಳ ಎನ್ನುವ ಹೆಬ್ಬಲಿ ಇದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸರ್ಕಾರದ ವಿರುದ್ಧ ಗುಡುಗಿದ್ದಾರೆ

ನಗರದಲ್ಲಿ ಪಂಚಮಸಾಲಿ ಸಭೆಯಲ್ಲಿ ಮಾತನಾಡಿದ ಅವರು , ಕೊಟ್ಟ ಮಾತು ತಪ್ಪಿದ ಕಾರಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನಮ್ಮ ಸಮಾಜದ ಶಾಪ ತಟ್ಟಿದೆ . ನಾವು ಬಹು ಸಂಖ್ಯಾತರು , ಕೊಟ್ಟ ಮಾತನ್ನ ಸಿಎಂ ಬಸವರಾಜ ಬೊಮ್ಮಾಯಿ ತಪ್ಪಬಾರದು . ಮಾತು ತಪ್ಪಿದ್ರೆ ನಮ್ಮ ಶಾಪ ನಿಮಗೆ ಮುಂದಿನ ದಿನಗಳಲ್ಲಿ ತಟ್ಟುತ್ತದೆ ಎಂದು ಎಚ್ಚರಿಕೆ ನೀಡಿದರು

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *