Breaking News

KGF : ಚಿನ್ನ ಅಲ್ಲ.. ಮಣ್ಣು ಕದ್ದ ಖದೀಮರು! – 14 ಮಂದಿ ಬಂಧನ

ಕೋಲಾರ: ಮುಚ್ಚಿದ್ದ ಚಿನ್ನದ ಗಣಿಯಲ್ಲಿ ಬಂಗಾರದ ಮಣ್ಣು ಕದ್ದಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದು. ಚಿನ್ನದ ಅದಿರು ಇದ್ದ ಮಣ್ಣನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ. ಗಿಲ್ಬರ್ಟ್ ಶಾಪ್ಟ್ ಹೆಸರಿನ ಮೈನಿಂಗ್ ಪ್ರದೇಶದಲ್ಲಿ ಕಳ್ಳರು ಪ್ರತ್ಯೇಕವಾಗಿ 2 ಬಾರಿ ಮಣ್ಣು ಕದ್ದಿದ್ದರು. ಫೆಬ್ರವರಿ 6 ಮತ್ತು, ಫೆ. 10 ರಂದು 12 ಮೂಟೆಗಳಷ್ಟು ಮಣ್ಣು ಕಳವು ಮಾಡಿದ್ದರು. ಸದ್ಯ, 2 ಪ್ರಕರಣದಲ್ಲಿ ಒಟ್ಟು 14 ಆರೋಪಿಗಳನ್ನ ಕೆಜಿಎಫ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ BNS ಹಾಗೂ ಕರ್ನಾಟಕ ಮೈನಿಂಗ್ ಆಕ್ಟ್ ನಡಿ ಕೆಜಿಎಫ್ ನಗರದ ಉರಿಗಾಂ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿನ್ನದ ಬೆಲೆ ಗಗನಕ್ಕೇರಿದೆ ಹೀಗಾಗಿಯೇ ಬಂಗಾರದ ಕಳ್ಳರು ಹೆಚ್ಚಾಗಿದ್ದಾರೆ. ಎಲ್ಲೆಡೆ ಚಿನ್ನವನ್ನು ಮೌಲ್ಯಯುತ ಮೆಟಲ್ ಎಂದು ಪರಿಗಣಿಸಲಾಗುತ್ತಿದೆ. ಹೀಗಿರುವಾಗ್ಲೇ ಕಳ್ಳರು ಚಿನ್ನದ ಮಣ್ಣನ್ನು ಕದ್ದಿದ್ದು ತೀವ್ರ ಸಂಚಲನ ಉಂಟುಮಾಡಿತ್ತು.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *