Breaking News

ಇಸ್ಪೀಟ್ ಜೂಜಾಟ: ಇಬ್ಬರು ಪೊಲೀಸರ ಅಮಾನತು

ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ದಿಗ್ಗಾಂವ್ ಗ್ರಾಮದಿಂದ ಬೆನಕನಹಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುವ‌ ವೇಳೆ ಸಿಕ್ಕಿಬಿದ್ದಿದ್ದ ಇಬ್ಬರು ಪೊಲೀಸರನ್ನು ಕಲಬುರಗಿ ಪೊಲೀಸ್‌ ಕಮಿಷನರ್ ಶರಣಪ್ಪ ಎಸ್.ಡಿ.ಇಲಾಖಾ ವಿಚಾರಣೆ ಬಾಕಿ ಇರಿಸಿ ಗುರುವಾರ ಅಮಾನತುಗೊಳಿಸಿದ್ದಾರೆ. ಕಲಬುರಗಿ ನಗರದ ಎಂ.ಬಿ ನಗರ ಪೊಲೀಸ್ ಠಾಣೆ ಸಿವಿಲ್‌ ಪೊಲೀಸ್ ಕಾನ್‌ಸ್ಟೆಬಲ್ ಗುರುನಾಥ ಹಾಗೂ ನಗರದ‌ ಸಶಸ್ತ್ರ ಮೀಸಲು ಘಟಕದ ಕಾನ್‌ಸ್ಟೆಬಲ್ ಮಡಿವಾಳಪ್ಪ ಅಮಾನತುಗೊಂಡವರು. ಇವರು ಫೆಬ್ರುವರಿ 17ರಂದು‌ ಇಸ್ಪೀಟ್ ಜೂಜಾಟದ ವೇಳೆಗೆ ಚಿತ್ತಾಪುರ‌ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಅವರ ವರದಿಯ ಪೊಲೀಸ್ ಕಮಿಷನರ್ ಈ‌ ಕ್ರಮ ಜರುಗಿಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *