ಬೆಂಗಳೂರಿನಲ್ಲಿ 19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತೆಗೆ ನಶೆ ಹಾಗೂ ಮಾದಕ ಮಾತ್ರೆ ನೀಡಿ ಈ ಕೃತ್ಯ ಎಸಗಲಾಗಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನ್ನೇರುಘಟ್ಟ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಪಶ್ಚಿಮ ಬಂಗಾಳ ಮೂಲದ ಡಿಕ್ಸಿನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಡಿಕ್ಸಿನ್ ಮತ್ತು ಮತ್ತೋರ್ವ ಗೆಳೆಯ ನಿಖಿಲ್ ಎಂಬಾತನೊಂದಿಗೆ ಸಂತ್ರಸ್ತೆ ವಿಲ್ಲಾಗೆ ತೆರಳಿದ್ದಳು. ಈ ವೇಳೆ ಯುವತಿಗೆ ನಶೆ ಮತ್ತು ಮಾದಕ ಮಾತ್ರೆಗಳನ್ನು ನೀಡಿ ಡಿಕ್ಸಿನ್ ಮತ್ತು ನಿಖಿಲ್ ಅತ್ಯಾಚಾರಗೈದು ಹಲ್ಲೆ ನಡೆಸಿದ್ದಾರೆ. ಪ್ರೀತಿಯ ಹೆಸರಲ್ಲಿ ಇಬ್ಬರಿಂದ ಅತ್ಯಾಚಾರ ನಡೆದಿದಿ ಎಂಬ ಗಂಭೀರ ಆರೋಪವನ್ನು ಯುವತಿ ಮಾಡಿದ್ದಾಳೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ನಿಖಿಲ್ ಹಾಸನ ಜಿಲ್ಲೆಯ ಸಕಲೇಶಪುರ ಮೂಲದವನು ಎಂದು ತಿಳಿದು ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

