ಬೆಂಗಳೂರು: 10 ಸಾವಿರ ರೂ. ಲಂಚ ಪಡೆಯುತ್ತಿದ್ದ ಜಿಬಿಎ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾವಲು ಬೈರಸಂದ್ರ ವಿಭಾಗದ ಸ್ಯಾನಿಟರಿ ಸೂಪರ್ ವೈಸರ್ ಎಂ. ನಾಗರಾಜು(39) ಬಂಧಿತರು. ಆರ್.ಟಿ. ನಗರ ಸಮೀಪ ಆದರ್ಶ ನಗರ ನಿವಾಸಿ ಅಬ್ದುಲ್ ರೆಹಮಾನ್ ಎಂಬುವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ನಾಗರಾಜು ಅವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ದೂರುದಾರ ಅಬ್ದುಲ್ ರೆಹಮಾನ್ ಅವರಿಗೆ ಸೇರಿದ ರಸ್ತೆ ಕತ್ತರಿಸುವ ಚಿಪ್ಪಿಂಗ್ ಯಂತ್ರವನ್ನು ನಾಗರಾಜು ಅವರು ಕಾಮಗಾರಿ ಮಾಡುವ ಸ್ಥಳದಿಂದ ಅನಧಿಕೃತವಾಗಿ ಜಪ್ತಿ ಮಾಡಿಕೊಂಡಿದ್ದರು. ಅದನ್ನು ಹಿಂತಿರುಗಿಸಲು 10 ಸಾವಿರ ರೂ. ಕೊಡುವೆಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅಬ್ದುಲ್ ರೆಹಮಾನ್ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಜಿಬಿಎ ಕಚೇರಿಯಲ್ಲಿ 10 ಸಾವಿರ ರೂ. ಪಡೆಯುವಾಗ ರೆಡ್ ಹ್ಯಾಂಡಾಗಿ ನಾಗರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

