Breaking News

ಕಾಲು ಟಚ್ ಆಗಿದ್ದಕ್ಕೆ ಕೊಲೆ ಕೇಸ್.. ಇಬ್ಬರ ಅರೆಸ್ಟ್..

ಬೆಂಗಳೂರು : ಬೆಂಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಬಸವೇಶ್ವರ ನಗರದಲ್ಲಿ ನಡೆದಿದ್ದ ಕೊಲೆ ಕೇಸ್ ನಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಸವೇಶ್ವರನಗರದ ಹೋಟೆಲ್ ನಲ್ಲಿ ಕೊಲೆ ಪ್ರಕರಣ ಸಂಬಂಧ ಮಂಜುನಾಥ್, ಭಾಗ್ಯರಾಜ್ ಎಂಬುವರ ಬಂಧನವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಮಾ.2ರ ರಾತ್ರಿ ಶಶಿಕುಮಾರ್ ಎಂಬಾತನ ಕೊಲೆಯಾಗಿತ್ತು. ಮೊದಲಿಗೆ ಕಾಲು ಟಚ್ ಆದ ವಿಚಾರಕ್ಕೆ ಜಗಳ ನಡೆದಿತ್ತು. ಶಶಿಕುಮಾರ್ & ಮಂಜುನಾಥ್ ಮಧ್ಯೆ ಜಗಳ ನಡೆದಿತ್ತು. ಈ ವೇಳೆ ಮನೆಯಿಂದ ತಮ್ಮ ಭಾಗ್ಯರಾಜ್ ಕರೆತಂದಿದ್ದ ಮಂಜುನಾಥ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನು. ಈ ವೇಳೆ ಕೋಪದಲ್ಲಿ ಚಾಕು ಹಿಡಿದು ಬಂದಿದ್ದ ಭಾಗ್ಯರಾಜ್ ಏಕಾಏಕಿ ಶಶಿಕುಮಾರ್ ಕತ್ತಿಗೆ ಇರಿದು ಕೊಲೆ ಮಾಡಿದ್ದನು. ಕೊಲೆ ನಂತರ ಇಬ್ಬರೂ ಆರೋಪಿಗಳು ಎಸ್ಕೇಪ್ ಆಗಿದ್ದರು. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿದ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *