Breaking News

ಕನಕಪುರ | ಜಮೀನಿಗೆ ಬೆಂಕಿ: ಹಳೆ ದ್ವೇಷ ಎಂದು ಆರೋಪ

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಚಾಮುಂಡಿಪುರದಲ್ಲಿ ಜಮೀನಿಗೆ ಬೆಂಕಿ ತಗುಲಿ ಮರಗಿಡಗಳು ಸುಟ್ಟು ನಾಶವಾಗಿವೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿದ್ದಾರೆ ಎಂದು ದೂರಿ ಜಮೀನಿನ ಮಾಲೀಕ ನಾಗರಾಜು ಪೊಲೀಸರಿಗೆ ದೂರು ನೀಡಿದ್ದಾರೆ. ನಾಗರಾಜು ಅವರು ಶನಿವಾರ ನಗರದ ನ್ಯಾಯಾಲಯಕ್ಕೆ ಹೋಗಿ ಸಂಜೆ ವಾಪಸ್ ಬರುವಾಗ ಜಮೀನಿಗೆ ಬೆಂಕಿ ಬಿದ್ದು ಮರಗಿಡ, ತೋಟದ ಮನೆ ಬೆಂಕಿಗೆ ಆಹುತಿಯಾಗಿದೆ. ಜಮೀನಿನಲ್ಲಿ ಕಟ್ಟಿದ್ದ ಜೋಡಿ ಹಸುಗಳಲ್ಲಿ ಒಂದು ಹಸು ಕಾಣೆಯಾಗಿದ್ದು, ಮತ್ತೊಂದು ಹಸುವಿಗೆ ಸುಟ್ಟು ಗಾಯಗಳಾಗಿವೆ. ‘ಹಲವು ವರ್ಷಗಳಿಂದ ಚಂದ್ರನಾಯ್ಕ, ಕಮಾರನಾಯ್ಕ, ಪಾಪಣ್ಣಿನಾಯ್ಕ ನಡುವೆ ಜಮೀನು ವಿವಾದ ನಡೆಯುತ್ತಿತ್ತು, ಶನಿವಾರ ವಿಚಾರಣೆ ಇದ್ದುದರಿಂದ ಕೋರ್ಟ್‌ಗೆ ಹೋಗಿದ್ದೆವು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿದ್ದಾರೆ’ ಎಂದು ನಾಗರಾಜು ಕೋಡಿಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *