ನಿಯತಿಯಾಗಿ ಸಂಬಳ ಪಡೆದು ಕರ್ತವ್ಯ ಮಾಡಬೇಕಾದವರು ಲಂಚಕ್ಕೆ ಕೈ ಚಾಚಿದರೆ, ಅಂತಿಮವಾಗಿ ಇದೇ ಗತಿ!
ಸರ್ಕಾರದ ಸಂಬಳ ಇದ್ದೂ ಲಂಚದ ಆಸೆ — ಕೊನೆಗೆ ಲೋಕಾಯುಕ್ತ ಬಲೆಗೆ ಇದೇ ಅಂತ್ಯ!
ಪ್ರಾಮಾಣಿಕತೆ ಬಿಟ್ಟು ಲಂಚದ ದಾರಿ ಹಿಡಿದರೆ ಅಂತಿಮ ಫಲಿತಾಂಶ ಇದೇ.
ಧಾರವಾಡ: ಲಂಚ ಸ್ವೀಕರಿಸುವಾಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.
ವಲಯ ಕಚೇರಿ–1ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಲ್ತ್ ಇನ್ಸ್ಪೆಕ್ಟರ್ ಹೀನಾ ಕೌಸರ್ ಬಂಧಿತರಾದವರು. ಧಾರವಾಡದ ಮಳೆಪ್ಪ ತಳವಾರ ಎಂಬುವವರು ರೊಟ್ಟಿ ಮಷಿನ್‌ಗೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪರವಾನಗಿ ನೀಡಲು ಹೆಲ್ತ್ ಇನ್ಸ್ಪೆಕ್ಟರ್ ಕೌಸರ್ ಅವರು ₹4500 ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ.
ಈ ಸಂಬಂಧ ಮಳೆಪ್ಪ ತಳವಾರ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಶನಿವಾರ ಧಾರವಾಡದ ವಲಯ ಕಚೇರಿ–1ರಲ್ಲಿ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ನಡೆಸಿದರು. ಕೌಸರ್ ಅವರಿಗೆ ಹಣ ನೀಡುವ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಲಾಯಿತು.
ಲೋಕಾಯುಕ್ತ ಎಸ್‌ಪಿ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

