Breaking News

ಕಾರವಾರ | ಹಣ ಗಳಿಸುವ ಆಮಿಷ: ಮಹಿಳೆಗೆ ₹7 ಲಕ್ಷ ವಂಚನೆ

ಬಿಡುವಿನ ಅವಧಿಯಲ್ಲಿ ಆನ್‌ಲೈನ್ ಮೂಲಕ ಕೆಲಸ ಮಾಡಿ ಹಣ ಗಳಿಸುವ ಸಂದೇಶ ನಂಬಿದ ಇಲ್ಲಿನ ಹೈಚರ್ಚ್ ರಸ್ತೆಯ ನಿವಾಸಿಯೊಬ್ಬರು ₹7.02 ಲಕ್ಷ ಕಳೆದುಕೊಂಡಿದ್ದಾರೆ.ವರ್ಷಾ ರೇವಣಕರ (52) ವಂಚನೆಗೆ ಒಳಗಾದ ಮಹಿಳೆ. ಈಚೆಗೆ ತಮ್ಮ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಬಂದಿದ್ದ ಸಂದೇಶ ನಂಬಿದ್ದ ಅವರು ವಂಚಕರ ಮಾತಿಗೆ ಮರುಳಾಗಿ ಹಣ ಹೂಡಿಕೆ ಮಾಡಿದ್ದರು. ಫೆ.27ರಿಂದ ಮಾರ್ಚ್ 2ರ ಅವಧಿಯಲ್ಲಿ ಹಂತ ಹಂತವಾಗಿ ಹೂಡಿಕೆ ಮಾಡಿಸಿದ ಅಪರಿಚಿತರು ನಂತರ ಹಣ ಮರಳಿಸದೆ, ಸಂಪರ್ಕಕ್ಕೂ ಸಿಗದೆ ವಂಚಿಸಿದ್ದಾಗಿ ವರ್ಷಾ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿದ್ದೇವೆ ಎಂದು ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *