ಅಪಘಾತಕ್ಕೆ ಒಳಗಾದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಬಂಗಾರದ ಸರ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಆರೋಪಿಯನ್ನು ಬಂಧಿಸಿದ ಪೊಲೀಸರು, ₹8 ಲಕ್ಷ ಮೌಲ್ಯದ 55 ಗ್ರಾಂ ತೂಕದ ಎರಡು ಎಳೆ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ಗೋವಿಂದಸ್ವಾಮಿ (48) ಬಂಧಿತ.ಮಾರ್ಚ್ 10ರಂದು ಅಜ್ಜಂಪುರ ರಸ್ತೆಯ ಬೋಕಿಕೆರೆ ಗೇಟ್ ಬಳಿ ಬೈಕ್ ಹಾಗೂ ಕಾರಿಗೆ ನಡುವೆ ಅಪಘಾತ ಸಂಭವಿಸಿತ್ತು. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಗಾಯಗೊಂಡ ಪ್ರಜ್ಞೆ ತಪ್ಪಿದ್ದರು. ಅವರ ಕೊರಳಲ್ಲಿದ್ದ 55 ಗ್ರಾಂ ಚಿನ್ನದ ಸರ ಕಳ್ಳತನವಾಗಿತ್ತು. ಈ ಕುರಿತು ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿವೈಎಸ್ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಹೊಸದುರ್ಗ ಪಿ.ಐ. ಕೆ.ಟಿ. ರಮೇಶ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಎಸ್‌ಐಗಳಾದ ಶ್ರೀಶೈಲ, ಮಹೇಶ್ ಕುಮಾರ್, ಸಿಬ್ಬಂದಿ ಕುಮಾರ್, ಉಮೇಶ್, ಗಂಗಾಧರ್, ತಿಪ್ಪೇಸ್ವಾಮಿ, ಚಂದ್ರಪ್ಪ, ರಾಜಣ್ಣ, ಜಗದೀಶ್ ತಂಡದಲ್ಲಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

