ಮಲ್ಪೆ: ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಉಪ್ಪೂರು ಗ್ರಾಮದ ಲಕ್ಷ್ಮೀನಗರದ ಕಿಶೋರ್ (24) ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ದ ಬ್ರಹ್ಮಾವರ, ಕುಂದಾಪುರ, ಉಡುಪಿ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. ವಾರೆಂಟ್ ಸಿಬಂದಿಯಾಗಿರುವ ಹೆಡ್ ಕಾನ್‌ಸ್ಟೆಬಲ್ ಸುರೇಶ್ ಕುಮಾರ್, ಆದರ್ಶ, ತನಿಖಾಧಿಕಾರಿ ಹುಸೇನ್ ಸಾಬ್ ಅವರ ತಂಡ ಮಾ. 11ರಂದು ಬ್ರಹ್ಮಾವರ ಕೊಳಲಗಿರಿಯ ಲಕ್ಷ್ಮೀನಗರದಲ್ಲಿ ಬಂಧಿಸಿದೆ. ಆರೋಪಿಗೆ ಮಾ. 26ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

