Breaking News

ಗೋಕರ್ಣ ಬೀಚ್‌ನಲ್ಲಿ ಗಾಂಜಾ ನಶೆಯಲ್ಲಿ ತೂರಾಡುತ್ತಿದ್ದ ಇಬ್ಬರಿಗೆ ಖಾಕಿ ಶಾಕ್‌!

ಕಾರವಾರ : ಗಾಂಜಾ ನಶೆಯಲ್ಲಿ ಗೋಕರ್ಣ ಕಡಲ ತೀರದಲ್ಲಿ ತೂರಾಡುತಿದ್ದ ಬೆಂಗಳೂರು ಮೂಲದ ಇಬ್ಬರು ಟೆಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಎಂ.ಎಸ್. ಪವನ್ (28) ಹಾಗೂ ರಾಘು ಸೆಲ್ವರಂಗನ್ (30) ಎಂದು ಗುತುತಿಸಲಾಗಿದೆ. ಇಬ್ಬರು ಗೋಕರ್ಣದ ರುದ್ರಪಾದದ ಕರಿಯಪ್ಪನ ಕಟ್ಟೆ ಸಮೀಪದ ಬ್ಲೂ ಪೀನ್ ಬೀಚ್ ಸ್ಟೇಟ್ ರೆಸಾರ್ಟ್ ಎದುರಿನ ಸಮುದ್ರ ತೀರದಲ್ಲಿ ಅಮಲಿನಲ್ಲಿ ತೇಲಾಡುತ್ತಿದ್ದರು.ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರು ಗಾಂಜಾ ಸೇವಿಸಿರುವುದು ದೃಢವಾಗಿದೆ ಎಂದು ತಿಳಿದುಬಂದಿದೆ. ಟೆಕ್ಕಿಗಳ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯ ಕಲಂ 27(b) ಅಡಿಯಲ್ಲಿ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *