Breaking News

ಅಕ್ರಮವಾಗಿ ಗೋವು ಸಾಗಣೆ; ಮೂವರ ವಿರುದ್ಧ ಪ್ರಕರಣ

ಹುಬ್ಬಳ್ಳಿ: ತಾಲ್ಲೂಕಿನ ಸುಳ್ಳ ಹಾಗೂ ಬ್ಯಾಹಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಲಹೊಂಗಲದ ಸಂಪಗಾವ ನಿವಾಸಿ ಬಾಬಾಜಾನ ಕುಂಡೆವಾಲಿ, ಶಬ್ಬೀರ ಮತ್ತಿಕೊಪ್ಪ ಹಾಗೂ ದಸ್ತಗೀರಿ ತಾಳಿಕೋಟಿ ಆರೋಪಿಗಳು. ಅವರು ಟಾಟಾ ಗೂಡ್ಸ್ ಕ್ಯಾಂಟರ್ ವಾಹನದಲ್ಲಿ ಬೈಲಹೊಂಗಲದಿಂದ ಹುಬ್ಬಳ್ಳಿಗೆ 23 ವಿವಿಧ ಹಸುಗಳು ಹಾಗೂ ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಈ ವೇಳೆ ವಾಹನವನ್ನು ತಡೆದು ಗೋವುಗಳ ರಕ್ಷಿಸಲಾಗಿದ್ದು, ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಶಿವಮೊಗ್ಗ: ಯುವತಿಯರ ಮೇಲೆ ಪಟಾಕಿ ಎಸೆದು ರೌಡಿ ಪುಂಡಾಟ; ಎಸ್ಪಿ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ

ಶಿವಮೊಗ್ಗ ನಗರದ ಹೊರವಲಯದ ಹರಿಗೆ ಗ್ರಾಮದಲ್ಲಿ ನಿರಂಜನ್ ಅಲಿಯಾಸ್ ಶಕೆ ಎಂಬ ಪುಡಿ ರೌಡಿ ಹಾಗೂ ಆತನ ಸಹಚರರು ಯುವತಿಯರ …

Leave a Reply

Your email address will not be published. Required fields are marked *