Breaking News

ಆಸ್ತಿಗಾಗಿ ಪೀಡಿಸಿ ಮಹಿಳೆಯ ಹತ್ಯೆ

ಅಥಣಿ: ಆಸ್ತಿಗಾಗಿ ಸುಜಾತಾ ತೇಜು ಪವಾರ ಎಂಬವರ ಜತೆ ಅಕ್ರಮ ಸಂಬಂಧ ಬೆಳೆಸಿದ್ದ ಆರೋಪಿ ಕುಮಾರ ಕಲ್ಲಪ್ಪಾ ಹವಾಲ್ದಾರ ಆಕೆಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಪಟ್ಟಣದ ಪಾರೆಶೇಟ್ಟಿ ಗಲ್ಲಿಯ ನಿವಾಸಿಯಾಗಿರುವ ಸುಜಾತಾ ಗಂಡನೊಂದಿಗೆ ಹೊಂದಾಣಿಕೆಯಾಗದ ಕಾರಣ ತವರು ಮನೆಯಲ್ಲಿ ವಾಸವಾಗಿದ್ದರು. ಆರೋಪಿ ಕುಮಾರ ಕಲ್ಲಪ್ಪಾ ಹವಾಲ್ದಾರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಈತ ಆಸ್ತಿಯನ್ನು ತನ್ನ ಹೆಸರಿಗೆ ಮಾಡು ಎಂದು ಪೀಡಿಸುತ್ತಿದ್ದ. ಇದಕ್ಕೆ ನಿರಾಕರಣೆ ಮಾಡಿದ್ದರಿಂದ ಪಟ್ಟಣದ ಹೊರವಲಯದಲ್ಲಿ ಇರುವ ತೋಟದಲ್ಲಿ ಕುತ್ತಿಗೆಗೆ ಬಿಗಿದು ಉಸಿರು ಗಟ್ಟಿಸಿ ಕೊಲೆಗೈದಿದ್ದಾನೆ ಎಂದು ಆರೋಪಿಸಿ ತಾಯಿ ಲೀಲಾವತಿ ಹೂಗಾರ ಅವರು ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಸುಮಾರು ಎರಡು ದಿನಗಳ ಹಿಂದೆ ಕೊಲೆನಡೆದಿರುವ ಬಗ್ಗೆ ಶಂಕೆ‌ ವ್ಯಕ್ತ ಪಡಿಸಿದರು .

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *