Breaking News

ಚಿರತೆ ಕೊಂದು ಸುಟ್ಟ ಕೇಸ್ ನಲ್ಲಿ ಬೇಟೆಗಾರರ ಜಾಲದ ಶಂಕೆ!

ತುಮಕೂರಿನಲ್ಲಿ ಉರುಳಿಗೆ ಸಿಲುಕಿದ ಚಿರತೆಯನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇದರ ಹಿಂದೆ ವ್ಯವಸ್ಥಿತ ವನ್ಯಜೀವಿ ಬೇಟೆಗಾರರ ತಂಡವಿರುವ ಶಂಕೆ ವ್ಯಕ್ತವಾಗಿದೆ. ಸ್ಥಳ ಪರಿಶೀಲನೆ ವೇಳೆ ಚಿರತೆ ಸೇರಿದಂತೆ ಇತರೆ ವನ್ಯಜೀವಿಗಳ ಕಳೆಬರಹಗಳು ಪತ್ತೆಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಬನ್ನೇರುಘಟ್ಟ ವನ್ಯಜೀವಿ ವಿಭಾಗದ ತಂಡವೂ ತನಿಖೆ ನಡೆಸಿದೆ. ಭದ್ರಾ ಟೈಗರ್‌ ರಿಸರ್ವ್‌ನಿಂದ ಕರೆಸಿದ ಡಾಗ್‌ ಸ್ಕ್ವಾಡ್‌ ಪರಿಶೀಲನೆ ವೇಳೆ ನಾಲ್ಕೈದು ಉರುಳುಗಳು ಹಾಗೂ ತೋಟವೊಂದರಲ್ಲಿ ಬೇಟೆಗೆ ಬಳಸಲಾಗುತ್ತದೆ ಎನ್ನಲಾದ ವಸ್ತುಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಮತ್ತಷ್ಟು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಪತ್ತೆಯಾದ ವನ್ಯಜೀವಿಗಳ ಕಳೆಬರಹದ ಮಾದರಿಗಳನ್ನು FSLಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಯಾವ ಪ್ರಾಣಿಗಳ ಕಳೆಬರಹ ಎಂಬುದು ಹಾಗೂ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಚಿರತೆ ಬೇಟೆಯ ಹಿಂದೆ ದೊಡ್ಡ ಜಾಲವಿದೆಯೇ ಎಂಬ ಬಗ್ಗೆಯೂ ಅರಣ್ಯ ಇಲಾಖೆ ತನಿಖೆ ಚುರುಕುಗೊಳಿಸಿದೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *