Breaking News

ಪ್ರಧಾನಿ ಅಭ್ಯರ್ಥಿಯ ಬಗ್ಗೆ ನೋಡೋಣ : ಮಲ್ಲಿಕಾರ್ಜುನ ೆ


ಭೋಪಾಲ/ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಯ ಬಳಿಕ ಪಕ್ಷದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ನೋಡೋಣ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಭೋಪಾಲದಲ್ಲಿ ಪ್ರಚಾರ ನಡೆಸಿದ ವೇಳೆ, ಪತ್ರಕರ್ತರು 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಖರ್ಗೆ, “ಮೊದಲು ಈ ಚುನಾವಣೆಯನ್ನು ಎದುರಿಸೋಣ.

“ಬಕ್ರೀದ್‌ ಮೇ ಬಚೇಂಗೆ ತೊ ಮೊಹರಮ್‌ ಮೇ ನಾಚೇಂಗೆ'(ಬಕ್ರೀದ್‌ ಹಬ್ಬದಲ್ಲಿ ಉಳಿದರೆ ಮೊಹರಂ ಹಬ್ಬದಲ್ಲಿ ಕುಣಿಯೋಣ). ಮೊದಲು ಪಕ್ಷದ ಅಧ್ಯಕ್ಷನಾದ ಅನಂತರ ಈ ಬಗ್ಗೆ ನೋಡೋಣ,’ ಎಂದು ಹೇಳಿದರು.

ಈ ಹೇಳಿಕೆಯ ಬಗ್ಗೆ ಆಕ್ಷೇಪ ಮಾಡಿದ ಬಿಜೆಪಿ ಶೆಹಜಾದ್‌ ಪೂನಾವಾಲ, “ಮೊದಲಿಗೆ ಮೊಹರಂ ಒಂದು ಸಂಭ್ರಮದ ಹಬ್ಬವಲ್ಲ. ಇದು ಶೋಕದ ದಿನವಾಗಿದೆ. ಖರ್ಗೆ ಅವರ ಹೇಳಿಕೆಯಿಂದ ಮುಸ್ಲಿಮರಿಗೆ ದೊಡ್ಡ ಅಪಮಾನವಾಗಿದೆ,’ ಎಂದು ತೀವ್ರವಾಗಿ ಖಂಡಿಸಿದ್ದಾರೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *