Breaking News

ಜಾಗ ಅಕ್ರಮವಾಗಿ ಪರಭಾರೆ ಮಾಡಿದ ಆರೋಪ: ಉಪನೋಂದಣಾಧಿಕಾರಿ ಸೇರಿ ನಾಲ್ವರ ಮೇಲೆ ಕೇಸು

ಬಳ್ಳಾರಿ ಹೊರ ವಲಯದ ಚಾಗನೂರು ಗ್ರಾಮದ 1ಎಕರೆ 58 ಸೆಂಟ್ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡಿದ ಆರೋಪದ ಮೇರೆಗೆ ಬಳ್ಳಾರಿಯ ಉಪ ನೋಂದಣಾಧಿಕಾರಿ ಸೇರಿ ನಾಲ್ವರ ಮೇಲೆ ನಗರದ ಬ್ರೂಸ್‌ಪೇಟೆ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ. ವಡ್ಡರ ರಂಗಮ್ಮ (66) ಎಂಬುವವರ ದೂರು ಆಧರಿಸಿ ಉಪ ನೋಂದಣಾಧಿಕಾರಿ, ಸುಂಕಪ್ಪ, ದಾನಪ್ಪ, ರಾಜಾ ಎಂಬುವವರ ಮೇಲೆ ಪೊಲೀಸ್‌ ಎಫ್‌ಐಆರ್‌ ಹಾಕಿದ್ದಾರೆ. ಪತಿಯಿಂದ ಪೌತಿ ಖಾತೆಯಾಗಿ ಬಂದಿದ್ದ ಜಮೀನನ್ನು ಆರೋಪಿಗಳು ನಕಲಿ ದಾಖಲೆ ಸೃಷ್ಟಿ ಮಾಡಿ ಅಕ್ರಮವಾಗಿ ಪರಭಾರೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *