Breaking News

ಏರ್‌ಗನ್‌ ಗುಂಡು ಎದೆಗೆ ತಗುಲಿ ಯುವಕ ಮೃತ್ಯು

ಹೊನ್ನಾವರ: ಏರಗನ್ ಮೂಲಕ ಗುಂಡು ತಗುಲಿ ಯುವಕನೊರ್ವ ಮೃತಪಟ್ಟ ಘಟನೆ ತಾಲೂಕಿನ ನಗರಬಸ್ತಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಡಗೇರಿ ಗ್ರಾಮದಲ್ಲಿ‌ ಮಾ.14ರ ಶನಿವಾರ ಸಾಯಂಕಾಲ ನಡೆದಿದೆ. ಹಾಡಗೇರಿ ನಿವಾಸಿ ಸುಬ್ರಹ್ಮಣ್ಯ ಮಂಜುನಾಥ ಮರಾಠಿ (19) ಮೃತ ಯುವಕ ಎಂದು ತಿಳಿದು ಬಂದಿದೆ. ಸುಬ್ರಹ್ಮಣ್ಯ ತೋಟಕ್ಕೆ ಬಂದ ಮಂಗನನ್ನು ಓಡಿಸಲು ಇಟ್ಟುಕೊಂಡಿದ್ದ ಏರ್ ಗನ್ ಸಿಡಿದು ಗುಂಡು ಹಾರಿ ಸಾವನ್ನಪ್ಪಿದ್ದಾರೆ ಎಂದು ಆತನ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಹೊನ್ನಾವರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇರಿಸಲಾಗಿದೆ. ಸ್ಥಳದಲ್ಲಿ ಪಿ.ಐ. ಸಿದ್ದರಾಮೇಶ್ವರ ಹಾಗೂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *