ದಂಡ ಹಾಕುವ ವಿಚಾರಕ್ಕೆ ಟ್ರಾಫಿಕ್ ಪೊಲೀಸ್ ಹಾಗೂ ಚಾಲಕನ ನಡುವಿನ ಗುದ್ದಾಟದ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿ ಚನ್ನಮ್ಮ ಸರ್ಕಲ್ ಬಳಿ ಬೈಕ್ ಚಾಲಕನೊಬ್ಬ ಹೋಗುತ್ತಿರುವಾಗ, ಟ್ರಾಫಿಕ್ ಪೊಲೀಸ್ ತಡೆದು ಡಾಕ್ಯುಮೆಂಟ್ ಚೆಕ್ ಮಾಡಿ, ಹಳೇ ಕೇಸ್ ಚೆಕ್ ಮಾಡಿದ್ದಾರೆ. ಚಾಲಕನಿಗೆ 500 ರೂಪಾಯಿ ದಂಡ ಕೂಡ ಹಾಕಿದ್ದಾರೆ. ಅದನ್ನು ಅದೇ ಚನ್ನಮ್ಮ ಸರ್ಕಲ್ ಬಳಿ ಇರುವ ಬಟ್ಟೆ ಅಂಗಡಿಯಲ್ಲಿ ಸ್ಕ್ಯಾನ್ ಮಾಡಲು ಹೇಳಿದ್ದಾರೆ. ಅದಕ್ಕೆ ವಾಗ್ವಾದಕ್ಕೆ ಇಳಿದ ಚಾಲಕನ ಜೊತೆ ಟ್ರಾಫಿಕ್ ಪೊಲೀಸರು ಗುದ್ದಾಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ. ಅಷ್ಟಕ್ಕೂ ಬಟ್ಟೆ ಅಂಗಡಿಯಲ್ಲಿ ದಂಡದ ಹಣವನ್ನು ಯಾಕೆ ಹಾಕಿಸುತ್ತಾರೆ…? ಈ ಜಗಳ ಯಾಕೆ ಆಯಿತು..? ಎಂಬುದು ಹಿರಿಯ ಅಧಿಕಾರಿಗಳಿಂದ ತಿಳಿದು ಬರಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

