Breaking News

ಗದಗದಲ್ಲಿ ಯುವತಿ ಜೊತೆ ಮದುವೆ ವಿಚಾರಕ್ಕೆ ಗಲಾಟೆ : ಕಲ್ಲು ಎತ್ತಿ ಹಾಕಿ ತಮ್ಮನನ್ನೆ ಬರ್ಬರವಾಗಿ ಕೊಂದ ಅಣ್ಣ!

ಗದಗದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಯುವತಿಯ ಜೊತೆ ಮದುವೆ ವಿಚಾರಕ್ಕೆ ಅಣ್ಣನೊಬ್ಬ ಸ್ವಂತ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಫಕೀರಪ್ಪ (19) ಎನ್ನುವ ಯುವಕನ ಕೊಲೆ ಆಗಿದೆ.ಆರೋಪಿ ಸಹೋದರ ಅಶೋಕನನ್ನು ಸದ್ಯ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕ ಮೊಲಂಗಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಅಲ್ಲಿಂದ ಹಿರೇಕೊಪ್ಪಕೆ ಕುರಿ ಮೇಯಿಸಲು ಬಂದಿದ್ದಾರೆ. ಈ ವೇಳೆ ಯುವತಿ ಜೊತೆಗೆ ಮದುವೆ ವಿಚಾರವಾಗಿ ಗಲಾಟೆ ನಡೆದು ತಮ್ಮ ಫಕೀರಪ್ಪನನ್ನು ಅಣ್ಣ ಅಶೋಕ್ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *