ಬಿಗ್ ಟಿವಿ ನ್ಯೂಸ್ ಇಂಪ್ಯಾಕ್ಟ್ …..!
ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮಟ್ಕಾ ದಂಧೆ ಅನ್ನೋದು ಸಮಾಜದ ಸ್ವಾಸ್ಥೆ ಕೆಡಿಸುತ್ತಿದೆ. ಹಣದ ಜೊತೆಗೆ ಕುಟುಂಬದ ನೆಮ್ಮದಿಯನ್ನೂ ಕಾಸಿಯುತ್ತೆ. ಇಂಥ ದಂಧೆಗೆ ಕಡಿವಾಣ ಹಾಕಲೇಬೇಕು. ಅಂಥ ಶ್ಲಾಘನೀಯ ಕಾರ್ಯವನ್ನ ಕುಂದಗೋಳ ಪೊಲೀಸರು ಮಾಡಿದ್ದಾರೆ.ಇದು ಮಟ್ಕಾ ದಂಧೆಕೋರರು ಎಷ್ಟೇ ಕಣ್ಣು ತಪ್ಪಿಸಿ ದಂಧೆ ಮಾಡಿದ್ರೂ ಪೊಲೀಸರು ಒಂದಲ್ಲ ಒಂದಿನ ಹೆಡೆ ಮುರಿ ಕಟ್ಟುತ್ತಾರೆ ಎನ್ನುವುದಕ್ಕೆ ಇದೆ ಸಾಕ್ಷಿ.ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ ಕೆಲಸ ಮಾಡೋದು ಅಷ್ಟೊಂದು ಸುಲಭ ಅಲ್ಲ. ಎಲ್ಲೇ ಕ್ರಿಮಿನಲ್ ಗಳು ಅಡಗಿದ್ರು ಅವರ ಹುಡುಕೋಕೆ ತುಂಬಾ ನೀಪುಣರಾಗಿರ್ತಾರೆ ನಮ್ಮ ಪೊಲೀಸರು.ಪೊಲೀಸರ ಈ ಕೆಲಸಕ್ಕೆ ನಾವು ಸಲಾಂ

ಅನ್ನಲೇ ಬೇಕು.ಒಂದು ಕಾಲದಲ್ಲಿ ಹಿಂದುಸ್ಥಾನಿ ಗಾಯನ, ಕೋಮು ಸೌಹಾರ್ದ ಹಬ್ಬಗಳು, ಜಾತ್ರೆ, ಪ್ರಗತಿಪರ ಕೃಷಿಯಿಂದ ಹೆಸರುವಾಸಿಯಾಗಿದ್ದ ಕುಂದಗೋಳಕ್ಕೆ ಇತ್ತೀಚಿಗೆ ಸಮಾಜದ ಸ್ವಾಸ್ತ್ಯ ಕೆಡಿಸುವಂತ ಹಲವು ಚಟಗಳು ಒಕ್ಕರಿಸುತ್ತಿವೆ. ಅಂಥದ್ದೇ ಮಟ್ಕಾ ಅನ್ನೋ ಚಟ ವ್ಯಾಪಿಸಿದೆ. ಕುಂದಗೋಳದಲ್ಲಿ ಮಟ್ಕಾ ಕೊರರನ್ನ ಹೆಡೆ ಮುರಿ ಕಟ್ಟಲು ಪೋಲೀಸರು ಯಶಸ್ವಿ ಆಗಿದ್ದಾರೆ. ಇದನ್ನು ನೋಡಿದ್ರೆ ಪೊಲೀಸರು ಎಷ್ಟು ಸ್ಮಾರ್ಟ್ ಎನ್ನುವುದು ತಿಳಿಯುತ್ತದೆ.

bigtvnews | Hubli Dharwad News | Kannada News | Karnataka News Hubli News | News In Hubli | Local news

