ಬಿಗ್ ಟಿವಿ ನ್ಯೂಸ್ ಎಫೆಕ್ಟ್: ವರದಿ ಬಳಿಕವೇ ಡಿಸಿಪಿ ನೇಮಕ ಮಾಡಿದ ಸರ್ಕಾರ!
ಹುಬ್ಬಳ್ಳಿ: ಹು-ಧಾ ಕಮಿಷನರೇಟ್‌ಗೆ ಹೊಸ ಶಕ್ತಿ – ಶೃತಿ ಎನ್.ಎಸ್. ಡಿಸಿಪಿಯಾಗಿ ನೇಮಕ!
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್‌ಗೆ ನೂತನ ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಶೃತಿ ಎನ್.ಎಸ್. ಅವರನ್ನು ಸರ್ಕಾರ ನೇಮಕ ಮಾಡಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಮಹಾನಿಂಗ ನಂದಗಾವಿ ವರ್ಗಾವಣೆಯಾದ ಹಿನ್ನೆಲೆ ಈ ಹುದ್ದೆ ತೆರವಾಗಿತ್ತು…

ಕೆಲವೇ ದಿನಗಳ ಹಿಂದೆ ಈ ಖಾಲಿ ಹುದ್ದೆ ಬಗ್ಗೆ ಬಿಗ್ ಟಿವಿ ನ್ಯೂಸ್” ವರದಿ ಪ್ರಸಾರ ಮಾಡಿತ್ತು. ನಗರದ ಕಾನೂನು ಸುವ್ಯವಸ್ಥೆಗೆ ಡಿಸಿಪಿ ಹುದ್ದೆ ಅಗತ್ಯ ಎಂಬುದನ್ನು ಹೈಲೈಟ್ ಮಾಡಲಾಗಿತ್ತು…
ಇದೀಗ ಆ ವರದಿಗೆ ತಕ್ಷಣ ಸ್ಪಂದಿಸಿದ ರಾಜ್ಯ ಸರ್ಕಾರ, ಶೃತಿ ಎನ್.ಎಸ್. ಅವರನ್ನು ಮಹತ್ವದ ಹುದ್ದೆಗೆ ನಿಯೋಜಿಸಿದೆ. ಇದರಿಂದ ಹು-ಧಾ ಕಮಿಷನರೇಟ್‌ಗೆ ಹೊಸ ಚೈತನ್ಯ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ…
ಬಿಗ್ ಟಿವಿ ನ್ಯೂಸ್” ವರದಿ ಬಳಿಕವೇ ಈ ನೇಮಕ ನಡೆದಿದೆ ಎನ್ನುವುದು ವಿಶೇಷ. ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ಮಾಧ್ಯಮದ ಒತ್ತಡ ಎಷ್ಟು ಪರಿಣಾಮಕಾರಿ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ..ನಗರದ ಜನತೆ ಕೂಡ ಹೊಸ ಡಿಸಿಪಿಯಿಂದ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲವಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

