Breaking News

ಮಂಗಳೂರು| ಗ್ಯಾಸ್ ಅಕ್ರಮ ಮರುಪೂರಣ; ಇಬ್ಬರು ಆರೋಪಿಗಳ ಬಂಧನ

ನಗರದ ಕುದ್ರೋಳಿ ಕಂಡತ್‌ಪಳ್ಳಿ ಎಂಬಲ್ಲಿ ಗ್ಯಾಸ್ ಹಂಡೆಯಿಂದ ಇನ್ನೊಂದು ಗ್ಯಾಸ್ ಹಂಡೆಗೆ ಅಕ್ರಮವಾಗಿ ಗ್ಯಾಸ್ ಮರುಪೂರಣ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ದಿನೇಶ್ ಸಾಲಿಯಾನ್ ಮತ್ತು ಸುನೀಲ್ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ. ಮಾ.17ರಂದು ಮಧ್ಯಾಹ್ನ 1:30ಕ್ಕೆ ನಗರದ ನ್ಯೂಚಿತ್ರಾ ಜಂಕ್ಷನ್ ಬಸವನಗುಡಿ ಲಕ್ಷ್ಮೀನಾರಾಯಣ ಟೆಂಪಲ್ ಕಡೆಯಿಂದ ಕಂಡತ್‌ಪಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿರುವ ನಿಹಾ ಗ್ಯಾಸ್ ಪಾಯಿಂಟ್ ಹೆಸರಿನ ಅಂಗಡಿಯ ಪಕ್ಕದಲ್ಲಿರುವ ಗೋದಾಮಿನಲ್ಲಿ ಈ ಇಬ್ಬರು ಆರೋಪಿಗಳು ಅಕ್ರಮವಾಗಿ ಗ್ಯಾಸ್ ಸಿಲೆಂಡರ್‌ಗಳನ್ನು ಸಂಗ್ರಹಿಸಿ ದೊಡ್ಡ ಹಂಡೆಯಿಂದ ಸಣ್ಣ ಹಂಡೆಗೆ ಮರುಪೂರಣ ಮಾಡುತ್ತಿದ್ದರು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಲಾಗಿದೆ. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *