Breaking News

ಕರಗ ಮುಗಿಸಿ ಮನೆಗೆ ಬರುವಾಗ ಹಲ್ಲೆ

ಶಿಡ್ಲಗಟ್ಟ: ಕರಗ ಮುಗಿಸಿ ಮನೆಗೆ ತೆರಳುತ್ತಿದ್ದ ನಗರದ ಗಾಂಧಿನಗರ ನಿವಾಸಿ ಶ್ರೀಧರ್​ ಮೇಲೆ ವ್ಯಕ್ತಿಯೊಬ್ಬ ಗುರುವಾರ ರಾತ್ರಿ ಹಲ್ಲೆ ಮಾಡಿದ್ದಾನೆ. ದಾರಿಯಲ್ಲಿ ಬೋವಿ ನಗರದ ವ್ಯಕ್ತಿ ಅಡ್ಡಗಟ್ಟಿದ್ದಾನೆ. ಯಾವುದೇ ಪ್ರಚೋದನೆ ಇಲ್ಲದೆ ಶ್ರೀಧರ್​ ಮೇಲೆ ಹಲ್ಲೆ ನಡೆಸಿದ ಆರೋಪಿ, ದೇಹದ ವಿವಿಧ ಭಾಗಗಳಿಗೆ ಗಾಯ ಮಾಡಿದ್ದಾನೆ.ಶ್ರೀಧರ್​ ಅವರಿಗೆ ಹಿಂದಿನಿಂದ ಬಂದು ಕುತ್ತಿಗೆ ಮತ್ತು ಕೈಗೆ ಹಲ್ಲೆ ಮಾಡಲಾಗಿದ್ದು, ತೀವ್ರ ಗಾಯಗಳಾಗಿವೆ. ಪೊಲೀಸರು ಬಂದ ಕೂಡಲೇ ಆರೋಪಿ ಕಾಲ್ಕಿತ್ತಿದ್ದಾನೆ. ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಠಾಣೆಯಲ್ಲಿ ಶ್ರೀಧರ್​ ದೂರು ದಾಖಲಿಸಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *