Breaking News

ರಸ್ತೆ ಅಪಘಾತ: ಸಿಆರ್‌ಪಿ ವೀರೇಶ ಚೌಧರಿ ಸಾವು

ಸಿಂದಗಿ: ತಾಲ್ಲೂಕಿನ ವಂದಾಲ ಗ್ರಾಮದ ಬಳಿ ಕಬ್ಬಿನ ಟ್ರ್ಯಾಕ್ಟರ್‌- ಬೈಕ್‌ ಮಧ್ಯೆ ಡಿಕ್ಕಿ ಉಂಟಾಗಿ ಬೈಕ್‌ ಸವಾರ ಶಿಕ್ಷಣ ಇಲಾಖೆಯ ಸಿಆರ್‌ಪಿ ವೀರೇಶ ಮಡಿವಾಳಪ್ಪ ಚೌಧರಿ (39) ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.ಯಲಗೋಡದಲ್ಲಿ ನಡೆಯಬೇಕಿದ್ದ ಕಲಿಕಾ ಹಬ್ಬದ ಪೂರ್ವಸಿದ್ಧತಾ ಕಾರ್ಯ ಮುಗಿಸಿಕೊಂಡು ಸಿಂದಗಿ ಪಟ್ಟಣಕ್ಕೆ ಮರಳುವಾಗ ಅಪಘಾತವಾಗಿದೆ.ಮೃತರ ಪತ್ನಿ ಈಶ್ವರಿ ನಾಗಠಾಣ ಅವರು ಸಿಂದಗಿ ತಾಲ್ಲೂಕು ಬಂದಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಸಿಂದಗಿ ತಾಲ್ಲೂಕು ಹಂದಿಗನೂರ ಗ್ರಾಮದಲ್ಲಿ ಬುಧವಾರ ನಡೆಯಲಿದೆ ಎಂದು ತಿಳಿಸಲಾಗಿದೆ. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಘಟನೆ ನಡೆದಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *