Breaking News

ಡ್ರಗ್ಸ್​ ಮಾರುತ್ತಿದ್ದ ಮೂವರ ಬಂಧನ

ಕನಕಪುರ: ರಸ್ತೆ ಬದಿಯ ಜಮೀನಿನಲ್ಲಿ ಮಾದಕ ದ್ರವ್ಯ ಮಾರುತ್ತಿದ್ದ ಮೂವರನ್ನು ನಗರ ಠಾಣೆ ಪೊಲೀಸರು ಬಂಧಿಸಿ, 30 ಸಾವಿರ ರೂ. ಮೌಲ್ಯದ 15 ಗ್ರಾಂ ಡ್ರಗ್ಸ್​ಅನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಖಾಲಕ್​ನಗರ ನಿವಾಸಿಗಳಾದ ಮುಬಾರಕ್​(22), ಅಖಿಲ್​(21), ಹಸನ್​(21) ಬಂಧಿತರು. ನಗರದ ಮಹರಾಜರ ಕಟ್ಟೆ ಬೈಪಾಸ್​ ರಸ್ತೆಯ ಜಮೀನಿನಲ್ಲಿ ಆರು ಮಂದಿ ಮಾದಕ ದ್ರವ್ಯ ಮಾರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಡಿವೈಎಸ್​ಪಿ ಗಿರಿ, ಸರ್ಕಲ್​ ಇನ್​ಸ್ಪೆಕ್ಟರ್​ ಅನಂತ್​ರಾಮ್​ ಮತ್ತವರ ಸಿಬ್ಬಂದಿ ಶುಕ್ರವಾರ ದಾಳಿ ನಡೆಸಿದ್ದು, ಮೂವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಮೂವರು ಪರಾರಿಯಾಗಿದ್ದಾರೆ. ನಗರಠಾಣೆಯಲ್ಲಿ ಪ್ರಕರದ ದಾಖಲಾಗಿದೆ.

Share News

About BigTv News

Check Also

ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು!

ರಾಮನಗರ: ವಿಶೇಷಚೇತನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಇಬ್ಬರು ಆರೋಪಿಗಳಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ 1ನೇ ಅಪರ …

Leave a Reply

Your email address will not be published. Required fields are marked *