Breaking News

ಸಂದೇಶ್ ಪಿಜಿ ವಿರುದ್ಧದ ಪ್ರಕರಣ ; ಸಿ.ಐ.ಡಿ ತನಿಖೆಗೆ

ಬೆಳ್ತಂಗಡಿ; ಅಮಾನತುಗೊಂಡ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಮುಂದಿನ ತನಿಖೆಯನ್ನು ಸಿ.ಐ.ಡಿ ನಡೆಸುವಂತೆ ಅದೇಶವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟನೆ ತಿಳಿಸಿದೆ.ಸಂದೇಶ್ ಪಿಜಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದರು. ಮಹಿಳೆ ದೂರಿನ ಹಿನ್ನೆಲೆ ಸಂದೇಶ್ ಪಿ.ಜಿ ಹಾಗೂ ಆತನ ಮೂವರು ಸಹಚರರಾದ ಖಾಸಗಿ ಕಾರು ಚಾಲಕ ಅಕ್ಬರ್, ಜತೆಗೆ ಆತನ ಪರಿಚಯದ ಸ್ಮಿತಾ ಹಾಗೂ ಸುನೀತಾ ಲೋಬೊ ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಆರೋಪಿ ಸಂದೇಶ್ ಪಿ.ಜಿ. 2020ರ ನವೆಂಬರ್ ನಿಂದ 2023ರ ಜೂನ್ ವರೆಗೆ ಆಗಾಗ ಬಂದು ಲೈಂಗಿಕ ಸಂಪರ್ಕ ನಡೆಸಿದ್ದು, ವಿರೋಧ ವ್ಯಕ್ತಪಡಿಸಿದರೆ ಬೆದರಿಕೆ ಒಡ್ಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದರು. ಜತೆಗೆ ಒಟ್ಟು 16.62 ಲಕ್ಷ ರೂ. ಹಣ ಪಡೆದು ವಂಚಿಸಿರುವ ಕುರಿತು ಕೂಡ ದೂರಿನಲ್ಲಿ ತಿಳಿಸಿದರು.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *