Breaking News

ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಧಾರವಾಡದ ಕುವರಿ ಆಯ್ಕೆ

ಧಾರವಾಡ: ನಗರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಕೆ.ಇ.ಬೋರ್ಡ್ ಹೈಸ್ಕೂಲ್ ವಿದ್ಯಾರ್ಥಿನಿ ಅಮೂಲ್ಯ ಬಸಯ್ಯ ಹಿರೇಮಠ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಮೂಲಕ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಕಸ ಗುಡಿಸುವ ಆಧುನಿಕ ಯಂತ್ರ ಆವಿಷ್ಕರಿಸಿರುವ ಈ ವಿದ್ಯಾರ್ಥಿನಿ, ಅದರ ಪ್ರಯೋಜನ ಮತ್ತು ಆವಿಷ್ಕಾರದ ಕುರಿತು ವಿವರಣೆ ನೀಡಿ ನಿರ್ಣಾಯಕರ ಗಮನಸೆಳೆದು ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.

ಸ್ವಚ್ಛ ಭಾರತ ಆಂದೋಲನದ ಘೋಷವಾಕ್ಯದ ಅಡಿ ಅಮೂಲ್ಯ ಹಿರೇಮಠ ಈ ಯಂತ್ರವನ್ನು ಆವಿಷ್ಕರಿಸಿದ್ದಾಳೆ.

Share News

About admin

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *