Breaking News

ಎರಡು ತಂಡಗಳ ಹೊಡೆದಾಟ: ಪ್ರತ್ಯೇಕ ಪ್ರಕರಣ ದಾಖಲು

ಬಂಟ್ವಾಳ: ಸಜೀಪಪಡು ಗ್ರಾಮದ ತಲೆಮೊಗರು ಮಸೀದಿಯ ಬಳಿ ಮಾ. 22ರಂದು ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಇದೀಗ ಎರಡು ತಂಡಗಳು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದು ತಂಡದಿಂದ ಶೌಕತ್ ಆಲಿ ಅವರು ದಾವೂದ್, ಜುಬೈರ್, ಸೈದುದ್ದಿನ್, ನವಾಜ್, ಗಫೂರ್, ಶರೀಪ್, ಆಶಿಕ್, ಹೈದರ್, ಆಸೀಪ್, ಆಶ್ರಫ್ ಎಸ್.ಕೆ. , ಇರ್ಫಾನ್ ಎಸ್.ಕೆ. ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ. ಮತ್ತೊಂದು ತಂಡದಿಂದ ಅಬ್ದುಲ್‌ ನವಾಝ್‌ ಅವರು ಶೌಕತ್‌, ಇಸಾಕ್, ಸಫಿಕ್‌, ಯಾಕೂಬ್, ಮಹಮ್ಮದ್‌ ಮುಸ್ತಫಾ, ನಾಸಿರ್‌, ನಿಝಾಲ್‌ ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಎರಡು ಕಡೆಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *