ಚೆನ್ನೈ: ಗಾಂಜಾ ನಶೆಯಲ್ಲಿ ಯುವಕರು ಕಬ್ಬಿಣದ ರಾಡ್ ಹಿಡಿದು ಶಾಲಾ ಬಸ್ ನಿಲ್ಲಿಸಿ ಬೆದರಿಕೆ ಹಾಕಿರುವ ಘಟನೆ ತಮಿಳುನಾಡಿನ ಉತ್ತಂಗರೈನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ನಿಂದಿಸಿ ಬೆದರಿಸಿಸಿದ್ದಾರೆ. ಉತ್ತಂಗರೈ-ಸೇಲಂ ರಸ್ತೆಯಲ್ಲಿ ಓಡಾಡುವ ಬಸ್, ಲಾರಿಗಳನ್ನು ತಡೆ ಹಿಡಿದು ಬೆದರಿಸಿದ್ದಾರೆ. ಸ್ಥಳೀಯರು ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳಿವೆ. ಆರೋಪಿಗಳ ವಿರುದ್ಧ ಹಿಂದೆಯೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ತನಿಖೆ ಆರಂಭಿಸಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

