Breaking News

ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!

ಹಾಸನ: ಗಾಂಜಾ ನಶೆ ಹಾಗೂ ಹಣದ ವಿಚಾರಕ್ಕಾಗಿ ನಡೆದ ಭೀಕರ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವರುಣ್ ಎಂಬ ಯುವಕ ತನ್ನದೇ ಸ್ನೇಹಿತರಿಂದ ಹತ್ಯೆಯಾಗಿದ್ದಾನೆ. ತಿಂಗಳಿಗೊಮ್ಮೆ ತನ್ನೂರಿಗೆ ಹೋಗುತ್ತಿದ್ದ ವರುಣ್, ಕಳೆದ ಬಾರಿ ಹೋದಾಗ ನಾಪತ್ತೆಯಾಗಿದ್ದ. ಮೂರು ದಿನಗಳ ನಂತರ ನಿರ್ಜನ ಪ್ರದೇಶದಲ್ಲಿ ಆತನ ಸುಟ್ಟ ಮೃತದೇಹ ಪತ್ತೆಯಾಗಿತ್ತು. ಪೊಲೀಸರ ತನಿಖೆಯಲ್ಲಿ ಹಂತಕ ಸ್ನೇಹಿತರ ಅಸಲಿ ಮುಖವಾಡ ಕಳಚಿದೆ. ವರುಣ್‌ನ ಸ್ನೇಹಿತ ಶಶಾಂಕ್, ಬೆಂಗಳೂರಿನಿಂದ ಗಾಂಜಾ (ಮಾಲ್) ತರುವಂತೆ ವರುಣ್ ಅಕೌಂಟ್‌ಗೆ 7 ಸಾವಿರ ರೂಪಾಯಿ ಹಾಕಿದ್ದ. ಆದರೆ ವರುಣ್ ಗಾಂಜಾವನ್ನೂ ತರದೆ, ಹಣವನ್ನೂ ಮರಳಿಸದೆ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಶಶಾಂಕ್ ಮತ್ತು ಗ್ಯಾಂಗ್, ವರುಣ್‌ನನ್ನು ಕಿಡ್ನ್ಯಾಪ್ ಮಾಡಿ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬೆಂಕಿ ಹಚ್ಚಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ನಶೆಯ ಹವ್ಯಾಸಕ್ಕೆ ಬಲಿಯಾದ ವರುಣ್ ಕುಟುಂಬ ಬೀದಿಗೆ ಬಿದ್ದಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *