Breaking News

ವಿರಾಟ್ ನ್ನು ಕೊಂಡಾಡಿದ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್‌ ತಾರೆ ಕಿಚ್ಚ ಸುದೀಪ್‌ ಅವರು ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟಿ೨೦ ವಿಶ್ವ ಕಪ್‌ ಪಂದ್ಯವನ್ನು ವೀಕ್ಷಿಸಲು ಪತ್ನಿ ಪ್ರಿಯಾ ಅವರೊಂದಿಗೆ ಮೆಲ್ಬೋರ್ನ್‌ಗೆ ಹೋಗಿದ್ದಾರೆ. ಅಲ್ಲಿ ಅವರು ಪಂದ್ಯವನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ.

ಭಾರತ ತಂಡ ರೋಚಕ ಗೆಲುವು ಸಾಧಿಸಿದ ಬಳಿಕ ಇನ್‌ಸ್ಟಾಗ್ರಾಮ್‌ ಮೂಲಕ ಖುಷಿ ಹಂಚಿಕೊಂಡಿದ್ದು, ಮಹಾರಾಜಾ ಎಲ್ಲಿದ್ದರೂ ಮಹಾರಾಜನೇ ತಾನೆ ಎಂಬುದಾಗಿ ಎಂದು ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ರಿಯಾಲಿಟಿ ಶೋನಿಂದ ಬಿಡುವು ಪಡೆದುಕೊಂಡು ಮೆಲ್ಬೋರ್ನ್‌ಗೆ ತೆರಳಿದ್ದರು. ಕ್ರಿಕೆಟ್‌ ಅಟಗಾರ ಹಾಗೂ ಟೀಮ್‌ ಇಂಡಿಯಾದ ಅಪ್ಪಟ ಅಭಿಮಾನಿಯಾಗಿರುವ ಅವರು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ವೀಕ್ಷಿಸಿದರು. ವಿರಾಟ್‌ ಕೊಹ್ಲಿ ಸಾಹಸದಿಂದ ಭಾರತ ತಂಡ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನವನ್ನು ಸೋಲಿಸುವುದನ್ನು ಅವರು ಕಣ್ತುಂಬಿಕೊಂಡಿದ್ದಾರೆ. ಈ ಖುಷಿಯಲ್ಲಿ ಅವರು ವಿರಾಟ್‌ ಕೊಹ್ಲಿಯನ್ನು ಕ್ರಿಕೆಟ್‌ನ ಮಹಾರಾಜ ಎಂದು ಹೊಗಳಿದ್ದಾರೆ.

Share News

About BigTv News

Check Also

2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ

ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ …

Leave a Reply

Your email address will not be published. Required fields are marked *