Breaking News

ನಂಜನಗೂಡು ಕಪಿಲಾ ನದಿ ದಂಡೆಯಲ್ಲಿ 45 ಮರಗಳ ನಾಶ – ಆರೋಪಿ ಬಂಧನ

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಪಿಲಾ ನದಿಯ ದಡದಲ್ಲಿ ಅರಣ್ಯ ಇಲಾಖೆ ಬೆಳೆಸಿದ್ದ 45 ವಿಭಿನ್ನ ಜಾತಿಯ ಮರಗಳನ್ನು ಅನುಮತಿ ಪಡೆಯದೆ ಕಡಿತ ಮಾಡಿದ ಪ್ರಕರಣದಲ್ಲಿ ಆಲತ್ತೂರು ಗ್ರಾಮದ ಕೃಷ್ಣ (45) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.ಈ ಕಟರ್ಪಣೆ ಮಾರ್ಚ್ 8ರಂದು ನಡೆದಿದೆ ಮತ್ತು ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. ಆದರೆ ಪ್ರಕರಣ ನಡೆದರೂ ಕೆಲ ದಿನಗಳವರೆಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾರ್ಚ್ 10ರಂದು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 17 ದಿನಗಳ ನಂತರ ಅಧಿಕಾರಿಗಳು ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Share News

About BigTv News

Check Also

ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಜಗಳ; ಚಿಕ್ಕಪ್ಪನಿಗೆ ಚಾಕು ಇರಿತ!

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ …

Leave a Reply

Your email address will not be published. Required fields are marked *