Breaking News

ಸ್ನೇಹಿತನ ಬರ್ತಡೆಗೆ ಕೇಕ್ ತರಲು ಹೋದವನು ಹಿಟ್ ‍‍‍& ರನ್‌ಗೆ ಬಲಿ!

ಮೈಸೂರು : ಸ್ನೇಹಿತನ ಬರ್ತಡೆಗೆ ಕೇಕ್ ತರಲು ಹೋದ ಯುವಕ ಹಿಟ್ ಅಂಡ್ ರನ್‌ಗೆ ಬಲಿಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಮುಖ್ಯರಸ್ತೆಯಲ್ಲಿ ನಡೆದಿದೆ. ಕುಶಾಲನಗರ ನಿವಾಸಿ ಅನಿಲ್ (32) ಮೃತ ಯುವಕ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಸ್ನೇಹಿತನ ಹುಟ್ಟುಹಬ್ಬಕ್ಕೆ ಕೇಕ್ ತರಲು ಕುಶಾಲನಗರದಿಂದ ಬೈಲುಕುಪ್ಪೆಗೆ ಬರುವ ವೇಳೆ ಅಪರಿಚಿತ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಬಳಿಕ ಆಟೋ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಈ ವೇಳೆ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಅದೇ ಕಾರು ಹರಿದಿದ್ದರಿಂದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಅನಿಲ್ 9 ತಿಂಗಳ ಮಗು, ಪತ್ನಿಯನ್ನ ಅಗಲಿದ್ದಾನೆ. ಈ ಘಟನಾ ಸಂಬಂಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ!

ದೊಡ್ಡಬಳ್ಳಾಪುರ: ಹೋಟೆಲ್‌ನಲ್ಲಿ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ …

Leave a Reply

Your email address will not be published. Required fields are marked *