Breaking News

ಬಾಡಿವಾರ್ನ್ ಕ್ಯಾಮೆರಾ ಆಫ್ ಮಾಡಿ ಹಣ ಅಕ್ರಮ ವಸೂಲಿಗೆ ಯತ್ನ: ಮೂವರು ಟ್ರಾಫಿಕ್ ಪೊಲೀಸರು ಸಸ್ಪೆಂಡ್!

ಬಾಡಿ ವಾರ್ನ್ ಕ್ಯಾಮೆರಾ ಆಫ್ ಮಾಡಿ ಹಣ ವಸೂಲಿ ಯತ್ನ: 3 ಟ್ರಾಫಿಕ್ ಪೊಲೀಸರು ಸಸ್ಪೆಂಡ್ — ಇನ್ನು ಕೆಲ ಠಾಣೆಗಳಲ್ಲಿ ಯಾಕೆ ಇದೇ ಧಂಧೆ ಮುಂದುವರಿಕೆ..?

ಕ್ಯಾಮೆರಾ ಆಫ್, ಕಲೆಕ್ಷನ್ ಆನ್! ಮೂವರು ಪೊಲೀಸರ ಸಸ್ಪೆಂಡ್ ಬಳಿಕವೂ ಕೆಲ ಠಾಣೆಗಳಲ್ಲಿ ನಿಯಮಕ್ಕೆ ಕಿಮ್ಮತ್ ಇಲ್ವಾ..?

ಬಾಡಿ ಕ್ಯಾಮೆರಾ ಆಫ್ ಮಾಡಿ ಅಕ್ರಮ ವಸೂಲಿ: ಕ್ರಮ ಕೈಗೊಂಡರೂ ಎಲ್ಲೆಡೆ ನಿಯಮ ಜಾರಿ ಆಗ್ತಿದೆಯಾ..?

ಸಸ್ಪೆಂಡ್ ನಂತರವೂ ಬದಲಾವಣೆ ಇಲ್ಲವಾ..?

ಕೆಲ ಪೊಲೀಸ್ ಠಾಣೆಗಳಲ್ಲಿ ಆದೇಶಕ್ಕೂ ಬೆಲೆ ಇಲ್ವಾ!

ಬೆಂಗಳೂರು: ವಾಹನ ಸವಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ…

ಈ ಕುರಿತು ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಅನೂಪ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಸಿಬ್ಬಂದಿಗಳ ವಿರುದ್ಧ, ವಾಹನ ಸವಾರರಿಗೆ ಕಿರುಕುಳ ನೀಡಿ ಲಂಚ ಪಡೆಯುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿಬಂದಿದ್ದವು…

ನಿಯಮಾನುಸಾರ ಸಂಚಾರಿ ಪೊಲೀಸರು ಕರ್ತವ್ಯದ ವೇಳೆ ‘ಬಾಡಿ ವಾರ್ನ್ ಕ್ಯಾಮೆರಾ’ಗಳನ್ನು ಕಡ್ಡಾಯವಾಗಿ ಧರಿಸಬೇಕು. ಆದರೆ ಆರೋಪಿಗಳಾದ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಕ್ಯಾಮೆರಾಗಳನ್ನು ಆಫ್ ಮಾಡಿಕೊಂಡು ಅಕ್ರಮ ಹಣ ವಸೂಲಿ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ…

ವಿಭಾಗೀಯ ತನಿಖೆಯಲ್ಲಿ ಮೂವರ ಲೋಪ ಸಾಬೀತಾದ ಹಿನ್ನೆಲೆ, ತಕ್ಷಣದಿಂದಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಈ ಕ್ರಮದಿಂದ ಪೊಲೀಸ್ ಇಲಾಖೆಯೊಳಗೆ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸಂದೇಶ ರವಾನೆಯಾಗಿದೆ.

Share News

About BigTv News

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *